ಅಂದುಕೊಂಡದ್ದನ್ನು ವಿದ್ಯಾರ್ಥಿ ಜೀವನದಲ್ಲಿ ಸಾಧಿಸಬಹುದು : ನ್ಯಾ.ಎಫ್.ಎಸ್.ಸಿದ್ದನಗೌಡರ

2 weeks ago 33

ಬೈಲಹೊಂಗಲ: ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನು ವಿದ್ಯಾರ್ಥಿ ಜೀವನದಲ್ಲಿ ಸಾಧಿಸಬಹುದು ಎಂದು ನ್ಯಾ.ಎಫ್.ಎಸ್.ಸಿದ್ದನಗೌಡರ ಹೇಳಿದರು.

ಸಮೀಪದ ಸುಕ್ಷೇತ್ರ ಇಂಚಲಶಿವಯೋಗಿಶ್ವರ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ ಅಂತಿಮ ವರ್ಷದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆರಿದವರಿದ್ದಾರೆ. ಅಂಥವರ ಜೀವನವೇ ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿಧಾಯಕ ನಿದರ್ಶನ.

ವಿದ್ಯಾರ್ಥಿಗಳು ಜೀವನದಲ್ಲಿ ಇಟ್ಟುಕೊಂಡ ಗುರಿಸಾಧನೆಗೆ ದಿನ ರಾತ್ರಿ ಎನ್ನದೆ ದೃಷ್ಟಿ ಎಲ್ಲವನ್ನು ಗುರಿಯಮೇಲಿರಿಸಿ ಇನ್ನೊಂದು ವಿಚಾರದ ಬಗ್ಗೆ ಕನಸ್ಸಿನಲ್ಲೂ ಯೋಚಿಸದೆ ಅಂದುಕೊಂಡ ಗುರಿ ಸಾಧನೆಯ ಹಾದಿಯಲ್ಲಿ ದೇಹದ ಕಷ್ಟುಗಳನ್ನು ಮರೆಯುತಾ ಸತತ ಪರಿಶ್ರಮದಿಂದ ಅಂದುಕೊಂಡ ಎಂತಹ ದೊಡ್ಡದಾದ ಗುರಿಯನ್ನು ಮುಟ್ಟಬಹುದು ಎಂದರು.

ಇಂದಿನ ಶಿಕ್ಷಣ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ನೌಕರಿಗಾಗಿ ಶಿಕ್ಷಣ, ಹೊಟ್ಟೆಗಾಗಿ ನೌಕರಿ ಎನ್ನದೆ ಉನ್ನತ ಶಿಕ್ಷಣ ಪಡೆಯುವತ್ತ ವಿದ್ಯಾರ್ಥಿಗಳ ಗಮನ ಇರಬೇಕು. ಜ್ಞಾನ ಪಡೆದ ವಿದ್ಯಾರ್ಥಿಗಳು ಸ್ವತಃ ತಾವೇ ತಮ್ಮ ಜೀವನದ ಶಿಲ್ಪಿಗಳಾಗಬೇಕು. ಪ್ರಪಂಚದಲ್ಲಿ ಸೋಲಿನಿಂದ ಜಯ ಸಾಧಿಸಿದ ಮಹಾನ್ ವ್ಯಕ್ತಿಗಳ ಇತಿಹಾಸ ಓದಬೇಕು. ನಮ್ಮ ಚಿಂತನೆ ಉನ್ನತ ಹುದ್ದೆಗಳದ್ದ ಗಮನ ಹರಿಸಿ ಆ ಮಾರ್ಗದಲ್ಲಿ ನಡೆದರೆ ಸಾಧನೆಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳ ಜೀವನಕ್ಕೆ ಸ್ಪೂರ್ತಿಯ ನುಡಿ ಹೇಳಿದರು.

ಸಂಸ್ಥೆಯ ಪ್ರಾಚಾರ್ಯ ಎಮ್.ಸಿ.ಮಟ್ಟಿ ಮಾತನಾಡಿ, ಪದವಿ ಮುಗಿಸಿದ ವಿದ್ಯಾರ್ಥಿಗಳು ಜೀವನದ ಪ್ರಮುಖ ಘಟ್ಟದಲ್ಲಿದ್ದು ಉತ್ತಮ ದಾರಿಯಲ್ಲಿ ಸಾಗಿದರೆ ದೇಶದ ಅಭ್ಯುಧ್ಯಯಕ್ಕೆ ಹೆಚ್ಚಿನ ಕೊಡುಗೆ ನೀಡಬಹುದಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುತ್ತಾ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಸ್ಮಾರಕವಾಗಬೇಕೆಂದು ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ಎಂ.ಆರ್.ರಂಜನಗಿ, ಡಾ.ಎಮ್.ಆಯ್.ನದಾಫ, ಎಸ್.ಬಿ.ಕಂಬಾರ, ಎಮ್.ಎಮ್.ಕೊಡ್ಲಿ,‌ ಎಸ್.ಆರ್. ಪೂಜಾರ್, ಅಯ್.ಎಸ್.ಪಾಟೀಲ, ಕೆ.ಎ.ಶೀಗಿಹಳ್ಳಿ ಇದ್ದರು.

ಪ್ರಸಕ್ತ ಸಾಲಿನಲ್ಲಿ ಪಿ ಎಚ್ ಡಿ ಪೂರ್ಣಗೊಳಿಸಿದ ಎಮ್.ಆಯ್.ನದಾಫ್ ಹಾಗೂ ಆಯ್ ಎಸ್.ಪಾಟೀಲ ಅವರನ್ನು ಸತ್ಕರಿಸಿಲಾಯಿತು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಅನುಭವ ಹಂಚಿಕೊಂಡರು. ತಾವು ಕಲೆತ ಶಿಕ್ಷಣ ಸಂಸ್ಥೆಗೆ ಕಿರು ಕಾಣಿಕೆ ನೀಡುವ ಮೂಲಕ ಸೇವಾ ಮನೊಭಾವನೆ ತೋರಿದರು.

ನುರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Read Entire Article