ಎನ್​ಒಸಿ ಕೊಡಲು ಲಂಚ : ಪಿಡಿಒ ಮತ್ತು ಬಿಲ್​ ಕಲೆಕ್ಟರ್​​ಗೆ 4 ವರ್ಷ ಜೈಲು ಶಿಕ್ಷೆ

1 week ago 23

ತುಮಕೂರು: ಕೋಳಿ ಫಾರಂ ನಿರ್ಮಾಣಕ್ಕೆ ಎನ್​ಒಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಪಿಡಿಒ ಮತ್ತು ಬಿಲ್​ ಕಲೆಕ್ಟರ್​​ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.

2018ರಲ್ಲಿ ಶಿರಾ ತಾಲೂಕಿನ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಡಿ.ಎಂ.ನಾಗರಾಜು ಮತ್ತು ಬಿಲ್ ಕಲೆಕ್ಟರ್ ಕೋಳಿ ಫಾರಂ ನಿರ್ಮಾಣಕ್ಕೆ ಎನ್​ಒಸಿ ಕೊಡಲು 10 ಸಾವಿರ ಲಂಚ ಕೇಳಿದ್ದರು.

ಲಂಚ ಪಡೆಯಲೆಂದು ಬಿಲ್ ಕಲೆಕ್ಟರ್ ತೆರಳಿದ್ದ, ವೇಳೆ ಶಿವಣ್ಣ ರೇಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದನು. ತನಿಕೆ ಬಳಿಕ ಪ್ರಕರಣ ಸಾಬೀತಾಗಿದ್ದು, ಬಿಲ್ ಕಲೆಕ್ಟರ್ ಶಿವಣ್ಣ ಮತ್ತು ಪಿಡಿಒ ಡಿ.ಎಂ.ನಾಗರಾಜುಗೆ 4 ವರ್ಷ ಜೈಲು ಶಿಕ್ಷೆ, 30 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಟಿ.ಪಿ ರಾಮೇಲಿಂಗೇಗೌಡ ರಿಂದ ಶಿಕ್ಷೆ ಪ್ರಕಟ ಮಾಡಿದ್ದಾರೆ.

Read Entire Article