ಕೀಣೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ವಶಕ್ಕೆ : ಹೆಬ್ಬಾಳಕರ್ ಪರಾಕ್ರಮ 

2 weeks ago 39

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ : ಕೀಣೆ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯೂ ರಾಜಕೀಯ ರೋಚಕ ತಿರುವು ಪಡೆಯಿತು.

22 ಸದಸ್ಯರುಗಳ ಕೀಣೆ ಗ್ರಾಮ ಪಂಚಾಯತಿ ವರ್ಷದ ಅವಧಿಯ ಮುಂಚೆ ಮತ್ತೆ ಅಧ್ಯಕ್ಷರು ಬದಲಾವಣೆ ಹಾಗೂ ಸ್ಥಳೀಯ ರಾಜಕೀಯ ಹೊಂದಾಣಿಕೆಯಿಂದಾಗಿ ಈ ಬದಲಾವಣೆ ಕಂಡುಬಂತು.

ಗ್ರಾಮ ಪಂಚಾಯತ್ ಅಧ್ಯಕ್ಷ ಹಿಂದುಳಿದ ವರ್ಗ ಮೀಸಲಾತಿಯನ್ನು ಹೊಂದಿದ್ದು, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ.

ಅದರಂತೆ ಅಧ್ಯಕ್ಷತೆ ಚುನಾವಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಅರ್ಚನಾ ಚಿಗರಿಗೆ 13 ಮತಗಳು ಪಡೆದು ಅಧ್ಯಕ್ಷೆಯಾಗಿ ವಿಜಯಶಾಲಿಯಾದ್ದರು. ಉಪಾಧ್ಯಕ್ಷನ್ನಾಗಿ ಬ್ರಹ್ಮಣ್ಣ ಪಾಟೀಲ್ ಅವರಿಗೆ 14 ಮತಗಳನ್ನು ಪಡೆದು ವಿಜಯಶಾಲಿಯಾದ್ದರು. ಈ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಿತು.

ಅಧ್ಯಕ್ಷರು ವಿರುದ್ಧವಾಗಿ ಒಂಬತ್ತು ಮತಗಳು ಬಿದ್ದರೆ ಉಪಾಧ್ಯಕ್ಷರ ವಿರುದ್ಧವಾಗಿ ಎಂಟು ಮತಗಳು ಬಿದ್ದವು. ನೋಡಲ್ ಅಧಿಕಾರಿಯಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಸುಭಾಷ್ ನಾಯಕ್ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.

ಒಟ್ಟಾರೆ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿದ್ದಾರೆ. ಇದರ ಫಲವೇ ಕೀಣೆ ಗ್ರಾಮ ಪಂಚಾಯತಿ ಕೈ ವಶವಾಗಿದೆ.

Read Entire Article