ಕೇದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ಉದ್ಘಾಟಿಸಿದ 93 ವಯಸ್ಸಿನ ಶಿವಪ್ಪ ಲಂಗೋಟಿ 

1 month ago 182

ಬೆಳಗಾವಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕೇದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯ್ಕೆಯಾದ ಅಮೃತ ಸರೋವರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕೇದನೂರು ಗ್ರಾಮ ಪಂಚಾಯತ್ ವತಿಯಿಂದ ಅಮೃತ್ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಹರ ಘರ್ ತಿರಂಗ, ಧ್ವಜ ಮೆರವಣಿಗೆ ಮತ್ತು ಸ್ವತಂತ್ರ ಸೇನಾನಿಗಳ ಕುರಿತು ಶಾಲಾ ಮಕ್ಕಳಿಗೆ ಅಧ್ಯಯನ ಶಿಬಿರಗಳು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಗಸ್ಟ್ 15ರಂದು ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಅಮೃತ ಸರೋವರ ಕೆರೆಯ ಆವರಣದಲ್ಲಿ 93 ವಯಸ್ಸಿನ ಹಿರಿಯರಾದ ಗ್ರಾಮದ ಶಿವಪ್ಪ ಲಂಗೋಟಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕಾಶವ್ವ ಕಲ್ಲಪ್ಪ ಹೊಸ್ಮನಿ, ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸವಿತಾ ಮಹದೇವ್ ಸಂಭಾಜಿ, ಗ್ರಾಮ ಪಂಚಾಯತ್ ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಐ. ಎಂ. ವಡಗಾಂವಕರ, ಐ.ಇ.ಸಿ. ಸಂಯೋಜಕರಾದ ರಮೇಶ್ ಮಾದರ್, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಗ್ರಾಮದ ನಾಗರಿಕರು, ಗ್ರಾಮದ ಶಾಲಾ ಮಕ್ಕಳು 75ನೇ ಸ್ವತಂತ್ರೋತ್ಸವದ ಅಮೃತ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.

Read Entire Article