ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಅನುಮತಿ ಅವಶ್ಯಕತೆ ಇಲ್ಲ : ಶಾಸಕ ಬೆನಕೆ ಬೆಳಗಾವಿ : ನಗರದ ಉತ್ತರ ಮತಕ್ಷೇತ್ರದಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಗಣೇಶ ಮಂಡಳಿಗಳಿಗೆ ಉತ್ತರ ಮತಕ್ಷೇತ್ರದ ಶಾಸಕ ಅನೀಲ್ ಬೆನಕೆ ಸಾವರ್ಕರ್ ಭಾವಚಿತ್ರ, ಫ್ಲೆಕ್ಸ್ ಹಂಚಿ ಅದ್ಧೂರಿಯಿಂದ ಗಣೇಶೊತ್ಸವ ಆಚರಣೆ ಮಾಡುವಂತೆ ತಿಳಿಸಿದರು. ನಗರದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿ, ಕ್ರಾಂತಿ ವೀರ ಸಾವರ್ಕರ್ , ಭಾವಚಿತ್ರ ಹಾಗೂ ಫ್ಲೆಕ್ಸ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ ತಿಲಕ್‌ರ ಭಾವಚಿತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಸಾವರ್ಕರ್ ಭಾವಚಿತ್ರವನ್ನು ಹೊಂದಿರುವ ಸುಮಾರು 10 ಸಾವಿರ ಟೀ ಶರ್ಟ್ ಗಳನ್ನು ಹಂಚುತ್ತಿದ್ದೇವೆ. ಮುಂಬೈ ನಂತರ ಬೆಳಗಾವಿಯಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಬೆಳಗಾವಿಯ ಗಣೇಶೋತ್ಸವಕ್ಕೆ 136 ವರ್ಷಗಳಾಗಿದೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ಗಣೇಶೋತ್ಸವ ಮಾಡುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಹೀಗಾಗಿ 200 ಸಾವರ್ಕರ್ ಫೋಟೋ ಹಾಗೂ 10 ಸಾವಿರ ಟೀ ಶರ್ಟ್, ಹಾಗೂ ಬ್ಯಾನರ್‌ಗಳನ್ನು ನೀಡಲಾಗುತ್ತಿದೆ ಎಂದರು. ಇನ್ನು ಭಾವಚಿತ್ರ ಅಳವಡಿಕೆಗೆ ಅನುಮತಿ ಕಡ್ಡಾಯ ಎಂಬ ಎಡಿಜಿಪಿ ಅಲೋಕ್‌ ಕುಮಾರ್‌ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು , ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬ ಮಾಡಲು ಆಗುವುದಿಲ್ಲ. ಬೇರೆಯವರಿಗೆ ಯಾಕೆ ಇಂತಹ ಕಾಯ್ದೆಗಳನ್ನು ಹಾಕೋದಿಲ್ಲ. ನಮಗಷ್ಟೇ ಯಾಕೆ ಕಾಯ್ದೆಗಳನ್ನು ಹಾಕುತ್ತಾರೆ. ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬಗಳನ್ನು ಯಾಕೆ ಮಾಡಬೇಕೆಂದು ಪ್ರಶ್ನೆ ಮಾಡಿದರು. ನಮಗೆ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ನಾವು ಭಾವಚಿತ್ರ ಹಾಕುತ್ತೇವೆ ಇದಕ್ಕೆ ಯಾರೂ ಅಡೆ ತಡೆ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಎಲ್ಲಾ ಗಣೇಶ ಮಂಡಳಗಳು ನಿರ್ಧಾರವನ್ನು ಮಾಡಿದ್ದು. ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡೇ ಮಡುತ್ತೇವೆ ಎಂದರು.

4 weeks ago 778

ಬೆಳಗಾವಿ : ನಗರದ ಉತ್ತರ ಮತಕ್ಷೇತ್ರದಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಗಣೇಶ ಮಂಡಳಿಗಳಿಗೆ ಉತ್ತರ ಮತಕ್ಷೇತ್ರದ ಶಾಸಕ ಅನೀಲ್ ಬೆನಕೆ ಸಾವರ್ಕರ್ ಭಾವಚಿತ್ರ, ಫ್ಲೆಕ್ಸ್ ಹಂಚಿ ಅದ್ಧೂರಿಯಿಂದ ಗಣೇಶೊತ್ಸವ ಆಚರಣೆ ಮಾಡುವಂತೆ ತಿಳಿಸಿದರು.

ನಗರದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿ, ಕ್ರಾಂತಿ ವೀರ ಸಾವರ್ಕರ್ , ಭಾವಚಿತ್ರ ಹಾಗೂ ಫ್ಲೆಕ್ಸ್ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ ತಿಲಕ್‌ರ ಭಾವಚಿತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಸಾವರ್ಕರ್ ಭಾವಚಿತ್ರವನ್ನು ಹೊಂದಿರುವ ಸುಮಾರು 10 ಸಾವಿರ ಟೀ ಶರ್ಟ್ ಗಳನ್ನು ಹಂಚುತ್ತಿದ್ದೇವೆ.

ಮುಂಬೈ ನಂತರ ಬೆಳಗಾವಿಯಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಬೆಳಗಾವಿಯ ಗಣೇಶೋತ್ಸವಕ್ಕೆ 136 ವರ್ಷಗಳಾಗಿದೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ಗಣೇಶೋತ್ಸವ ಮಾಡುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಹೀಗಾಗಿ 200 ಸಾವರ್ಕರ್ ಫೋಟೋ ಹಾಗೂ 10 ಸಾವಿರ ಟೀ ಶರ್ಟ್, ಹಾಗೂ ಬ್ಯಾನರ್‌ಗಳನ್ನು ನೀಡಲಾಗುತ್ತಿದೆ ಎಂದರು.

ಇನ್ನು ಭಾವಚಿತ್ರ ಅಳವಡಿಕೆಗೆ ಅನುಮತಿ ಕಡ್ಡಾಯ ಎಂಬ ಎಡಿಜಿಪಿ ಅಲೋಕ್‌ ಕುಮಾರ್‌ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು , ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬ ಮಾಡಲು ಆಗುವುದಿಲ್ಲ. ಬೇರೆಯವರಿಗೆ ಯಾಕೆ ಇಂತಹ ಕಾಯ್ದೆಗಳನ್ನು ಹಾಕೋದಿಲ್ಲ. ನಮಗಷ್ಟೇ ಯಾಕೆ ಕಾಯ್ದೆಗಳನ್ನು ಹಾಕುತ್ತಾರೆ. ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬಗಳನ್ನು ಯಾಕೆ ಮಾಡಬೇಕೆಂದು ಪ್ರಶ್ನೆ ಮಾಡಿದರು.

ನಮಗೆ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ನಾವು ಭಾವಚಿತ್ರ ಹಾಕುತ್ತೇವೆ ಇದಕ್ಕೆ ಯಾರೂ ಅಡೆ ತಡೆ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಎಲ್ಲಾ ಗಣೇಶ ಮಂಡಳಗಳು ನಿರ್ಧಾರವನ್ನು ಮಾಡಿದ್ದು. ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡೇ ಮಡುತ್ತೇವೆ ಎಂದರು.

Read Entire Article