ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ದೂರ ದೃಷ್ಟಿ ಯೋಜನೆ ವರದಾನ

2 weeks ago 37

ಬೆಳಗಾವಿ : ಗ್ರಾಮ ಪಂಚಾಯತಿಗಳು ಸಮಗ್ರ ಅಭಿವೃದ್ಧಿ ಹೊಂದಲು ಅನೇಕ ಯೋಜನೆಗಳನ್ನು ಸರಕಾರ ಮತ್ತು ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸಿದೆ.

ಗ್ರಾಮ ಪಂಚಾಯತಿಗಳಲ್ಲಿ ಈಗ ದೂರ ದೃಷ್ಟಿ ಯೋಜನೆಯನ್ನು ಜನರ ಸಹಭಾಗಿತ್ವದಲ್ಲಿ ಗ್ರಾಮೀಣದ ಸರ್ವಾಂಗೀಣ ಅಭಿವೃದ್ಧಿಯ ಸಲುವಾಗಿ ಗ್ರಾಮದ ಕುಂದು ಕೊರತೆಗಳನ್ನು ಅರಿತು ಅಭಿವೃದ್ಧಿ ಪರವಾಗಿರುವಂತಹ ಕಾಮಗಾರಿಗಳನ್ನು ಗ್ರಾಮಸ್ಥರಿಂದಲೇ ಗುರುತಿಸುವುದು ದೂರ ದೃಷ್ಟಿ ಯೋಜನೆ ಮುಖ್ಯ ಉದ್ದೇಶವಾಗಿದೆ.

ಗ್ರಾಮದ ಸರ್ವಾಂಗಿನ ಅಭಿವೃದ್ಧಿಯ ಸಲುವಾಗಿ ಜನರ ಸಲಹೆಗಳು ಮತ್ತು ಅವರ ಸಹಭಾಗಿತ್ವವನ್ನು ದೂರ ದೃಷ್ಟಿ ಯೋಜನೆಯ ಮೂಲಕ ಗ್ರಾಮಸ್ಥರು ಭಾಗಿಯಾಗಿ ಅಭಿವೃದ್ಧಿ ಪರವಾದ ವಿಷಯಗಳು ಕುರಿತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮತ್ತು ಗ್ರಾಮಸ್ಥರ ಕೂಡಿ ಚರ್ಚಿಸಿ ಯೋಜನೆ ರೂಪಿಸಲು ಸಹಕಾರಿಯಾಗಿದೆ. ಅದರಂಗವಾಗಿ ಬೆಳಗಾವಿ ತಾಲೂಕಿನ ಹಂದಿಗನೂರು ಗ್ರಾಮ ಪಂಚಾಯ್ತಿಯೂ ದೂರು ದೃಷ್ಟಿ ಯೋಜನೆಯ ಹಮ್ಮಿಕೊಂಡಿದ್ದು, ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳು ಇದರಲ್ಲಿ ಭಾಗವಹಿಸಿ ಹಂದಿಗನೂರು ಗ್ರಾಮದ ಸರ್ವಾಂಗಿನ ಅಭಿವೃದ್ಧಿ ಸಲುವಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿತಾ ಚೌಗುಲೆ ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿ .ಪಿ .ತಳವಾರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ರಂಜಿತ್, RDPR ಸಂಪನ್ಮೂಲ ವ್ಯಕ್ತಿಗಳಾದ ಕುಸುಮಾ, ರಾಮಪುರ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read Entire Article