ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ 

1 week ago 26

ಹೈದರಾಬಾದ್: ಚೆನ್ನೈನ ಉದ್ಯಮಿ ಅಬ್ದುಲ್ ಘನಿ ಎಂಬುವವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ 1.02 ಕೋಟಿ ದೇಣಿಗೆ ನೀಡಿದ್ದಾರೆ.

ಪತ್ನಿ ಸುಬೀನಾ ಬಾನು ಮತ್ತು ಮಕ್ಕಳೊಂದಿಗೆ ದೇವರ ದರ್ಶನ ಪಡೆದ ಘನಿ ಅವರು ತಿರುಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು 87 ಲಕ್ಷ ಹಾಗೂ ಎಸ್.ವಿ.ಅನ್ನಪ್ರಸಾದಂ ಟ್ರಸ್ಟ್‌ಗೆ 15 ಲಕ್ಷ ಒದಗಿಸಿದರು.

ದೇವಾಲಯ ಸಮಿತಿಯ ಅಧಿಕಾರಿಯೊಬ್ಬರಿಗೆ ಘನಿ ಕುಟುಂಬದವರು 1.02 ಕೋಟಿ ರೂ. ಮೊತ್ತದ ಡಿ.ಡಿ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ವೆಂಕಟೇಶ್ವರ, ಅಲ್ಲಾ, ಏಸು ಎಲ್ಲರೂ ಒಂದೇ ಎಂದು ನಂಬಿದ್ದೇನೆ. ನಾನು ವೆಂಕಟೇಶ್ವರ ಸ್ವಾಮಿಯ ಭಕ್ತ. ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Read Entire Article