ಪಂತಬಾಳೇಕುಂದ್ರಿಗೆ ಡಬಲ್ ಅನುದಾನ ಭಾಗ್ಯ: 12 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ, ಸಮುದಾಯ ಭವನ ನಿರ್ಮಾಣ ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಪಂತ ಬಾಳೇಕುಂದ್ರಿ ಬಿ‌ಕೆ ಗ್ರಾಮಕ್ಕೆ ಶಾಸಕರ ಅನುದಾನದ ಜೊತೆಗೆ ವಿಧಾನ ಪರಿಷತ್ ಸದಸ್ಯರ ಅನುದಾನವೂ ಹರಿದುಬಂದಿದ್ದು, ಡಬಲ್ ಅನುದಾನ ಭಾಗ್ಯ ಲಭಿಸಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರ ಶಾಸಕರ ಅನುದಾನದ 7 ಲಕ್ಷ ರೂ. ವೆಚ್ಚದಲ್ಲಿ ಮಂದಿರದ ಸಮುದಾಯ ಭವನ ನಿರ್ಮಾಣ ಕಾರ್ದ ಜೊತೆಗೆ, ಚನ್ನರಾಜ ಹಟ್ಟಿಹೊಳಿ ಅವರ ವಿಧಾನ ಪರಿಷತ್ ಸದಸ್ಯರ ಅನುದಾನದ 5 ಲಕ್ಷ ರೂ.ಗಳಲ್ಲಿ ಶಾಲಾ ಕೊಠಡಿ ನಿರ್ಮಾಣ ನಡೆಯಲಿದೆ. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಹೆಚ್ಚುವರಿ‌ ಕೊಠಡಿ ನಿರ್ಮಾಣಕ್ಕಾಗಿ ಎಂಎಲ್ ಸಿ ಅನುದಾನದಲ್ಲಿ ಐದು ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಿ, ಸೋಮವಾರ ಕಾಮಗಾರಿಗೆಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು. ಶಾಸಕರ ಅನುದಾನದಲ್ಲಿ ಶ್ರೀ ದುರ್ಗಾದೇವಿ ಮಂದಿರದ ನೂತನ ಸಮುದಾಯ ಭವನ ನಿರ್ಮಾಣಕ್ಕಾಗಿ 7 ಲಕ್ಷ ರೂ,ಗಳನ್ನು ಒದಗಿಸಲಾಗಿದ್ದು, ಈಗಾಗಲೇ ಮೊದಲನೇ ಕಂತನ್ನು ವಿತರಿಸಿದ್ದು, ಇವತ್ತು ಕೊನೆಯ ಹಂತದ ಚೆಕ್‌ನ್ನು ದೇವಸ್ಥಾನದ ಕಮೀಟಿಯವರಿಗೆ ಚನ್ನರಾಜ ಹಟ್ಟಿಹೊಳಿ ಹಸ್ತಾಂತರಿಸಿದರು. ಶ್ರಾವಣ ಸೋಮವಾರದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮಹಾಪ್ರಸಾಸಕ್ಕೆ ಸಹ ಹಟ್ಟಿಹೊಳಿ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪ್ರೇಮ ಕೋಲಕಾರ, ದತ್ತು ಕೋಲಕಾರ, ಸುರೇಶ ತಳವಾರ, ಉಮಾಜಿರಾವ್ ಜಾಧವ್, ಪ್ರಕಾಶ ಕೋಲಕಾರ, ಮೈನೂದ್ದಿನ ಅಗಸಿಮನಿ, ನೂರ್ ಮುಲ್ಲಾ, ಅಪ್ಸರ್ ಜಮಾದಾರ, ನಜೀರ ಜಮಾದಾರ ಅಲ್ತಾಫ್ ಯಾದವಾಡ, ಯುನೂಫ್ ಜಮಾದಾರ, ಜಾನೂಲ್ ಮಕಾನದಾರ, ಸಿಕಂದರ್ ಅಗಸಿಮನಿ, ಜಮೀಲ್ ಖಾಜಿ, ಹೊನಗೌಡ ಪಾಟೀಲ, ಸುರೇಶ ಕಾಳೋಜಿ, ವಿನಯಗೌಡ ಪಾಟೀಲ, ರಾಮನಗೌಡ ಪಾಟೀಲ, ಪರಲು ಪಾಟೀಲ, ದೇವಸ್ಥಾನಗಳ ಕಮೀಟಿ ಸದಸ್ಯರು, ಉರ್ದು ಶಾಲೆಯ ಸಿಬ್ಬಂದಿ, ಗ್ರಾಮ ಪಂಚಾಯತಿಯ ಅಧಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

1 month ago 374

ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಪಂತ ಬಾಳೇಕುಂದ್ರಿ ಬಿ‌ಕೆ ಗ್ರಾಮಕ್ಕೆ ಶಾಸಕರ ಅನುದಾನದ ಜೊತೆಗೆ ವಿಧಾನ ಪರಿಷತ್ ಸದಸ್ಯರ ಅನುದಾನವೂ ಹರಿದುಬಂದಿದ್ದು, ಡಬಲ್ ಅನುದಾನ ಭಾಗ್ಯ ಲಭಿಸಿದೆ.

ಲಕ್ಷ್ಮೀ ಹೆಬ್ಬಾಳಕರ್ ಅವರ ಶಾಸಕರ ಅನುದಾನದ 7 ಲಕ್ಷ ರೂ. ವೆಚ್ಚದಲ್ಲಿ ಮಂದಿರದ ಸಮುದಾಯ ಭವನ ನಿರ್ಮಾಣ ಕಾರ್ದ ಜೊತೆಗೆ, ಚನ್ನರಾಜ ಹಟ್ಟಿಹೊಳಿ ಅವರ ವಿಧಾನ ಪರಿಷತ್ ಸದಸ್ಯರ ಅನುದಾನದ 5 ಲಕ್ಷ ರೂ.ಗಳಲ್ಲಿ ಶಾಲಾ ಕೊಠಡಿ ನಿರ್ಮಾಣ ನಡೆಯಲಿದೆ.

ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಹೆಚ್ಚುವರಿ‌ ಕೊಠಡಿ ನಿರ್ಮಾಣಕ್ಕಾಗಿ ಎಂಎಲ್ ಸಿ ಅನುದಾನದಲ್ಲಿ ಐದು ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಿ, ಸೋಮವಾರ ಕಾಮಗಾರಿಗೆಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಿದರು.

ಶಾಸಕರ ಅನುದಾನದಲ್ಲಿ ಶ್ರೀ ದುರ್ಗಾದೇವಿ ಮಂದಿರದ ನೂತನ ಸಮುದಾಯ ಭವನ ನಿರ್ಮಾಣಕ್ಕಾಗಿ 7 ಲಕ್ಷ ರೂ,ಗಳನ್ನು ಒದಗಿಸಲಾಗಿದ್ದು, ಈಗಾಗಲೇ ಮೊದಲನೇ ಕಂತನ್ನು ವಿತರಿಸಿದ್ದು, ಇವತ್ತು ಕೊನೆಯ ಹಂತದ ಚೆಕ್‌ನ್ನು ದೇವಸ್ಥಾನದ ಕಮೀಟಿಯವರಿಗೆ ಚನ್ನರಾಜ ಹಟ್ಟಿಹೊಳಿ ಹಸ್ತಾಂತರಿಸಿದರು.

ಶ್ರಾವಣ ಸೋಮವಾರದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮಹಾಪ್ರಸಾಸಕ್ಕೆ ಸಹ ಹಟ್ಟಿಹೊಳಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪ್ರೇಮ ಕೋಲಕಾರ, ದತ್ತು ಕೋಲಕಾರ, ಸುರೇಶ ತಳವಾರ, ಉಮಾಜಿರಾವ್ ಜಾಧವ್, ಪ್ರಕಾಶ ಕೋಲಕಾರ, ಮೈನೂದ್ದಿನ ಅಗಸಿಮನಿ, ನೂರ್ ಮುಲ್ಲಾ, ಅಪ್ಸರ್ ಜಮಾದಾರ, ನಜೀರ ಜಮಾದಾರ ಅಲ್ತಾಫ್ ಯಾದವಾಡ, ಯುನೂಫ್ ಜಮಾದಾರ, ಜಾನೂಲ್ ಮಕಾನದಾರ, ಸಿಕಂದರ್ ಅಗಸಿಮನಿ, ಜಮೀಲ್ ಖಾಜಿ, ಹೊನಗೌಡ ಪಾಟೀಲ, ಸುರೇಶ ಕಾಳೋಜಿ, ವಿನಯಗೌಡ ಪಾಟೀಲ, ರಾಮನಗೌಡ ಪಾಟೀಲ, ಪರಲು ಪಾಟೀಲ, ದೇವಸ್ಥಾನಗಳ ಕಮೀಟಿ ಸದಸ್ಯರು, ಉರ್ದು ಶಾಲೆಯ ಸಿಬ್ಬಂದಿ, ಗ್ರಾಮ ಪಂಚಾಯತಿಯ ಅಧಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Read Entire Article