ಬೆಳಗಾವಿಯಲ್ಲಿ ಸಿಬ್ಬಂದಿಗಳಿಂದ ಅರಣ್ಯ ಹುತಾತ್ಮ ದಿನಾಚರಣೆ 

3 weeks ago 36

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ : ಸಪ್ಟೆಂಬರ್ 11 ರಂದು ಪ್ರತಿ ವರ್ಷ ಅರಣ್ಯ ಹುತಾತ್ಮ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಅರಣ್ಯ ಅಧಿಕಾರಿಗಳು ಕರ್ತವ್ಯದಲ್ಲಿ ಹುತಾತ್ಮರಾದವರಿಗೆ ಅವರಿಗೆ ಗೌರವಾರ್ಥ ಆಚರಣೆ ಮಾಡಲಾಗುತ್ತದೆ.

ಈ ವೇಳೆ ಅರಣ್ಯ ಇಲಾಖೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿಗಳು ಮಂಜುನಾಥ್ ಚೌವ್ಹಾಣ್, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ದರ್ಶನ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಖಾನಾಪುರ್ ಉಪ ವಿಭಾಗ ವತಿಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ್ ಹಾಗೂ ವಲಯ ಕವಿತಾ ಈರನಟ್ಟಿ, ಲೋಡಾ ವಲಯ ಅರಣ್ಯ ಅಧಿಕಾರಿ ನಾಗರಾಜ್ ಭೀಮ್ ಗೋಳ,

ಕಣಕುಂಬಿ ವಲಯ ಅರಣ್ಯ. ಅಧಿಕಾರಿ, ಗಣೇಶ ಶೆಟ್ಟರ್ ಮತ್ತು ನಾಗರಗಾಳಿ ಉಪ ವಿಭಾಗ ವತಿಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬ್ಬಡಿಗಿ, ನಾಗರಗಾಳಿ ವಲಯದ ಅರಣ್ಯ ಅಧಿಕಾರಿ ರತ್ನಾಕರ್ ಓಬನ್, ವರಗೋಲಿ ಹಳ್ಳಿ ವಲಯ ಅಧಿಕಾರಿ ವಾಣಿಶ್ರೀ ಹೆಗಡೆ ಉಪ ವಲಯ ಅರಣ್ಯ ಅಧಿಕಾರಿಗಳು ,ಅರಣ್ಯ ರಕ್ಷಕರು, ಅರಣ್ಯವೀಕ್ಷಕರು ಉಪಸ್ಥಿತರಿದ್ದರು.

Read Entire Article