ಬೆಳಗಾವಿ ಜಿಲ್ಲೆಯನ್ನು 4 ಜಿಲ್ಲೆಗಳಾಗಿ ವಿಭಜಿಸು : ಸವದತ್ತಿ ಯಲ್ಲಮ್ಮ ದೇವಿಗೆ ಭಕ್ತನ ಹರಕೆ 

1 week ago 18

ಬೆಳಗಾವಿ : ಜಿಲ್ಲೆಯನ್ನು ವಿಭಜಿಸುವಂತೆ ಹರಕೆ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಭಕ್ತನ ಪತ್ರ ಹಾಕಿದ್ದಾರೆ.

ಜಿಲ್ಲೆಯನ್ನು 4 ಜಿಲ್ಲೆಗಳಾಗಿ ವಿಭಜಿಸು, ಮುಖ್ಯಮಂತ್ರಿಗೆ ಒಳ್ಳೆ ಬುದ್ದಿ ನೀಡು ಎಂದು ಹರಕೆ ಪತ್ರದಲ್ಲಿ ಬರೆಯಲಾಗಿದೆ. ಜೆ.ಹೆಚ್‌.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು.

ಈಗ 14 ತಾಲೂಕು ಆಗಿವೆ, ಹೀಗಾಗಿ ಬೆಳಗಾವಿಯನ್ನು ವಿಭಜಿಸಿ ಬೆಳಗಾವಿ, ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ನಗರಗಳನ್ನು ಜಿಲ್ಲೆಗಳಾಗಿ ಮಾಡಿ. ಕೊಡಗಿನಲ್ಲಿ ಕೇವಲ 2 ವಿಧಾನ ಸಭಾ ಕ್ಷೇತ್ರವಿದ್ದರೂ ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರ ಇದ್ದು ನಾಲ್ಕು ಜಿಲ್ಲೆಗಳನ್ನಾಗಿ ಎಂದು 4 ಪುಟಗಳ ಸುದೀರ್ಘ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದಾರೆ.

Read Entire Article