ಭಾರತ್ ಜೋಡು ಯಾತ್ರೆ ಹಿಂದೆ ಕಾಂಗ್ರೆಸ್ ಪಕ್ಷದ ರಣತಂತ್ರ

3 weeks ago 66

ವರದಿ : ರತ್ನಾಕರ್ ಗೌಂಡಿ, ಬೆಳಗಾವಿ

ನವದೆಹಲಿ : ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ,ಉದ್ಯೋಗ, ಖಾಸಗೀಕರಣ, ದೇಶದ ಗಡಿಗಳ ಸಂರಕ್ಷಣೆ ,ದೇಶದಲ್ಲಿನ ಸೌಹಾರ್ದತೆಯನ್ನು ಹಾಳು ಮಾಡುತ್ತಿರುವ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಮತ್ತು ವಿವಿಧ ಸಂಘಟನೆಗಳು ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಭಾರತ್ ಜೋಡು ಯಾತ್ರೆಯನ್ನು ಹಮ್ಮಿಕೊಂಡಿದೆ.

2022 ಸೆಪ್ಟೆಂಬರ್ 7ನೇ ತಾರೀಖಿನಿಂದ 12 ರಾಜ್ಯಗಳ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ದಿನ 22 ರಿಂದ 23 ಕಿ.ಮೀ ನಡೆಯಲಿರುವ ಯಾತ್ರೆ 5 ತಿಂಗಳವರೆಗೆ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 150 ದಿನ ಭಾರತ್ ಜೋಡು ಯಾತ್ರೆಯ ಮೂಲಕ ಕಾಂಗ್ರೆಸ್ ಹೆಜ್ಜೆ ಹಾಕುತ್ತಿದೆ.

ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಹಿರಿಯ, ಕಿರಿಯ ನಾಯಕರುಗಳು ಹಾಗೂ ವಿವಿಧ ಸಂಘಟನೆಗಳು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲತೆಯನ್ನು ಹೊಂದಿದ್ದು, ಈ ಕಡೆ ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು ರೈತರ ಸಮಸ್ಯೆಗಳು, ರೈತರ ಆತ್ಮಹತ್ಯೆ ,ದೇಶದ ಗಡಿ ಸಂರಕ್ಷಣೆ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ಭಾರತದ ವಿದೇಶ ನೀತಿಗಳು ವಿಫಲತೆ ಗೊಂಡಿರುವುದು ಮತ್ತು ಭಾರತದ ಕೋಮ ಸೌಹಾರ್ದತೆ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಭಾರತೀಯರ ಒಡೆದು ಹೋದ ಹೃದಯಗಳು ಮತ್ತು ಮನಸುಗಳನ್ನು ಒಂದು ಮಾಡುವ ಸಲುವಾಗಿ ಯಾತ್ರೆಯನ್ನು ಹಮ್ಮಿಕೊಂಡಿದ್ದ ಎಂದು ಕಾಂಗ್ರೆಸ್ ತಿಳಿಸಿದೆ.

ಭಾರತದ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಕಾಶ್ಮೀರದವರೆಗೆ ನಾವು 150 ದಿನಗಳ ವರೆಗೆ ಕಾಲ್ನಡಿಗೆ ಮೂಲಕ ಜನರನ್ನು ಸಂದರ್ಶಿಸುವುದು ಮತ್ತು ಸೌಹಾರ್ದತೆ ಸಂದೇಶವನ್ನು ನೀಡಲು ಈ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ ಎಂದು ಭಾರತೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಯಾತ್ರೆಯಲ್ಲಿ , ತಮಿಳುನಾಡು ಜನತೆ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಮತ್ತು ಯಾತ್ರೆಗೆ ಬಾರೀ ಜನ ಬೆಂಬಲ ದೊರಕುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಪ್ಟೆಂಬರ್ 30 ರಿಂದ ಮೈಸೂರು – ಬಳ್ಳಾರಿ- ರಾಯಚೂರು ಮಾರ್ಗವಾಗಿ ಈ ಯಾತ್ರೆ, ಕರ್ನಾಟಕದಿಂದ ಸಂಚರಿಸಲಿದೆ. ಇದರ ಪ್ರಯುಕ್ತವಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷ ಈ ಯಾತ್ರೆಯನ್ನು 2023ರ ವಿಧಾನಸಭೆ ಚುನಾವಣೆಯ ಭಾಗವಾಗಿ ನೋಡ್ತಾ ಇದೆ.

ಆದರೆ ಇದರ ರಾಜಕೀಯ ವಿಶ್ಲೇಷಣೆ ಏನಾಗಿರಬಹುದು ಆದರೆ ಭಾರತ್ ಜೋಡು ಯಾತ್ರೆ ಯಾತ್ರೆ ದಕ್ಷಿಣ ಭಾರತದಲ್ಲಿ ಅಪಾರ ಜನ ಬೆಂಬಲ ಪಡೆಯುತ್ತಿರುವುದು ವಿಶೇಷವಾಗಿದೆ.
ಇತ್ತ ಕಡೆ ಭಾರತೀಯ ಜನತಾ ಪಕ್ಷ ಜನಸ್ಪಂದನಾ ಸಮಾವೇಶ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ.

ಹೀಗೆ ಚುನಾವಣೆ ರಣತಂತ್ರಕ್ಕೆ ಎಲ್ಲಾ ಪಕ್ಷಗಳು ತಮ್ಮದೇ ಆದ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಭಾರತ ಜೋಡೂ ಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಗುರಿಯಾಗಿಟ್ಟು ಬಿಜೆಪಿ ಆರೋಪ ಮಾಡಲು ಪ್ರಾರಂಭಿಸಿದೆ.

ಅದರ ಭಾಗವಾಗಿ ರಾಹುಲ್ ಗಾಂಧಿ ತೊಡುವ ಬಟ್ಟೆಗಳ ಬೆಲೆ ಎಷ್ಟು ?ಯಾವ ಬ್ರಾಂಡಿನ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ? ಪಾದರಕ್ಷೆ ಬ್ರ್ಯಾಂಡ್ ಯಾವುದು? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲು ಆರಂಭಿಸಿದ್ದಾರೆ.

ಇದರ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ ನಾಯಕರುಗಳ ಪ್ರಧಾನಿ, ಗೃಹ, ಮಂತ್ರಿಗಳ ಉಡುಗೆಗಳು ಮತ್ತು ಅವರ ಶೋಕಿಗಳ ಕುರಿತು ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭಿಸಿದ್ದಾರೆ. ಒಟ್ಟಿನಲ್ಲಿ ಈ ಯಾತ್ರೆ ಭಾರತೀಯ ಜನತಾ ಪಕ್ಷಕ್ಕೆ ನುಂಗಲಾರದ ಮತ್ತು ಅರಗಿಸಿಕೊಳ್ಳಲಾರದ ತುತ್ತಾಗಿದೆ ಎಂದು ಹೇಳಬಹುದು.

Read Entire Article