ಯುವಕನ ಜೊತೆ ಮಗಳು ಓಡಿ ಹೋಗಿದ್ದಕ್ಕೆ ಮನನೊಂದು ತಂದೆ ಆತ್ಮಹತ್ಯೆ

1 week ago 26

spot_img

For Breaking News Download App

ಮಂಡ್ಯ: ಯುವಕನ ಜೊತೆ ಮಗಳು ಓಡಿ ಹೋಗಿದ್ದಕ್ಕೆ ತಂದೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ನಡೆದಿದೆ.

ಕೀರ್ತನಾ, ಅಭಿ ಕಳೆದ ಐದು ದಿನ ಹಿಂದೆ ಓಡಿ ಹೋಗಿದ್ದರು. ಪ್ರೇಮಿಗಳನ್ನ ಹುಡುಕಿಕೊಡುವಂತೆ ಕೆ.ಆರ್.ಪೇಟೆ ಠಾಣೆಗೆ ಪೋಷಕರು ದೂರು ನೀಡಿದ್ದರು.

ಐದು ದಿನವಾದರೂ ಮಗಳು ಸಿಗದ ಕಾರಣ ಮರ್ಯಾದೆಗೆ ಅಂಜಿ ಯುವತಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ತಂದೆ ರವಿ (47) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ದೂರು ನೀಡಿದಾಗ ಕ್ರಮ ತೆಗೆದುಕೊಳ್ಳದಿದ್ಕೆ ಸಂಬಂಧಿಕರು ಕೆ.ಆರ್.ಪೇಟೆ ಪೊಲೀಸ್ ಠಾಣೆ ಮುಂದೆ ಮೃತ ರವಿ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

For Breaking News Download App

Read Entire Article