ಸರಸಕ್ಕೆ ಬಂದವನ ಮರ್ಮಾಂಗ ಕತ್ತರಿಸಿದ 55 ವರ್ಷದ ಮಹಿಳೆ 

1 week ago 27

spot_img

For Breaking News Download App

ಆಂಧ್ರಪ್ರದೇಶ : ಸರಸಕ್ಕೆ ಬಂದ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ 55 ವರ್ಷದ ಪ್ರಿಯತಮೆ ಈ ಕೃತ್ಯವೆಸಗಿದ್ದಾಳೆ. 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ ಮಹಿಳೆ ಕತ್ತರಿಸಿದ್ದಾಳೆ.

ಇಬ್ಬರ ನಡುವೆ 10 ವರ್ಷಗಳಿಂದ ವಿವಾಹೇತರ ಅಕ್ರಮ ಸಂಬಂಧ ಬೆಳೆದಿತ್ತು. ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋದಾಗ ಮಹಿಳೆ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಬ್ಲೇಡ್ ನಿಂದ ಆತನ ಮರ್ಮಾಂಗ ಕತ್ತರಿಸಿದ್ದಾಳೆ.

ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

For Breaking News Download App

Read Entire Article