1137 ಸಿವಿಲ್ ಪೊಲೀಸರ ನೇಮಕಾತಿಗೆ ಅ. 20 ರಿಂದ ಅರ್ಜಿ ಸ್ವೀಕಾರ

khushihost
1137 ಸಿವಿಲ್ ಪೊಲೀಸರ ನೇಮಕಾತಿಗೆ ಅ. 20 ರಿಂದ ಅರ್ಜಿ ಸ್ವೀಕಾರ

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ 1137 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಗಳ ನೇಮಕಾತಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಕಳೆದ ತಿಂಗಳು 4 ಸಾವಿರ ಪೊಲೀಸರ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಈಗ 1137 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಗಳ ನೇಮಕಾತಿಗೆ ಅನುಮತಿ ನೀಡಲಾಗಿದ್ದು, ಅಕ್ಟೋಬರ್ 20 ರಿಂದ ಅರ್ಜಿ ಸ್ವೀಕರಿಸಲಿದ್ದು, ನ. 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

683 ಪುರುಷರು, 229 ಮಹಿಳೆಯರು ಸೇರಿದಂತೆ ತೃತೀಯ ಲಿಂಗಿಗಳು, ಸೇವಾನಿರತ ಕಾನ್ ಸ್ಟೇಬಲ್ ಹುದ್ದೆಗಳು ಮೀಸಲಾಗಿವೆ. ಅರ್ಜಿ ಮತ್ತು ಮಾಹಿತಿಗೆ https://ksp.karnataka.gov.in,  http://ksp.recruitment.in/ ಗಮನಿಸಬಹುದಾಗಿದೆ.

Share This Article