ಕಟ್ಟಿ ಹಾಕಿ ದಲಿತ ಯುವಕನ ಮೇಲೆ ಹಲ್ಲೆ : 14 ಜನರ ಬಂಧನ

khushihost
ಕಟ್ಟಿ ಹಾಕಿ ದಲಿತ ಯುವಕನ ಮೇಲೆ ಹಲ್ಲೆ : 14 ಜನರ ಬಂಧನ

ವಿಜಯಪುರ : ದಲಿತ ಯುವಕನನ್ನು ಸವರ್ಣಿಯರು ಕಟ್ಟಿ ಹಾಕಿ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಡೋಮನಾಳ ಗ್ರಾಮದಲ್ಲಿ ದಾವಲ್ ಮಲಿಕ ಉರುಸ ವೇಳೆ ನಡೆದಿದೆ.

ನಿನ್ನೆ ರಾತ್ರಿ ದಾವಲ್ ಮಲಿಕ ಉರುಸ ವೇಳೆ ಸವರ್ಣಿಯರು ದಲಿತ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.

ಉರುಸ ವೇಳೆ ದಲಿತ ಯುವಕ ಸಾಗರನನ್ನು ಥಳಿಸಿ, ಕಟ್ಟಿ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ 14 ಜನರ ವಿರುದ್ಧ ಪ್ರಕ್ರಣ ದಾಖಲಾಗಿದ್ದು, ಹಲ್ಲೆ ಮಾಡಿದ್ದ 14 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article