ಮಠ, ಮಂದಿರಗಳಿಗೆ 23.95 ಕೋಟಿ ರೂ. ಬಿಡುಗಡೆ

khushihost
ಮಠ, ಮಂದಿರಗಳಿಗೆ 23.95 ಕೋಟಿ ರೂ. ಬಿಡುಗಡೆ

ಬೆಂಗಳೂರು: ರಾಜ್ಯದ ಮಠ, ಮಂದಿರಗಳು ಹಾಗೂ ಸಂಘ ಸಂಸ್ಥೆಗಳಿಗೆ 23.95 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಒಟ್ಟು 55 ಮಠಗಳು, 81 ದೇಗುಲಗಳು, 25 ಸಂಘ ಸಂಸ್ಥೆಗಳಿಗೆ ಒಟ್ಟು 23.95 ಕೋಟಿ ಬಿಡುಗಡೆಯಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಬಾಗಲಕೋಟ ಜಿಲ್ಲೆಯ ಆಲಗೂರು ಗ್ರಾಮದಲ್ಲಿ ಸ್ಥಾಪನೆಯಾಗಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ 3ನೇ ಪೀಠಕ್ಕೂ ಅನುದಾನ ಬಿಡುಗಡೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಹಾಗೂ ಒಕ್ಕೂಟದ ಸದಸ್ಯರಾಗಿರುವ ರಾಜ್ಯದ ಪಂಚಮಸಾಲಿ ಸ್ವಾಮೀಜಿಗಳ ಮಠಗಳ ಒಕ್ಕೂಟದ ಟ್ರಸ್ಟ್​ಗೆ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

Share This Article