ಜನಸಂಕಲ್ಪಯಾತ್ರೆಯಲ್ಲಿ  26 ಜನರ ಹಣ, ಮೊಬೈಲ್ ಕಳ್ಳತನ

khushihost
ಜನಸಂಕಲ್ಪಯಾತ್ರೆಯಲ್ಲಿ  26 ಜನರ ಹಣ, ಮೊಬೈಲ್ ಕಳ್ಳತನ

ಕೊಪ್ಪಳ:  ಬಿಜೆಪಿ ಸಂಕಲ್ಪ ಯಾತ್ರೆಯಲ್ಲೂ ಕಳ್ಳರ ತಮ್ಮ ಕರಾಮತ್ತು ತೋರಿಸಿದ್ದಾರೆ. ಜಿಲ್ಲೆಯ ಕುಷ್ಟಗಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪಯಾತ್ರೆಯಲ್ಲಿ ಹಣ,‌ ಮೊಬೈಲ್ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ನೂರಾರು ಪೊಲೀಸರು ಇದ್ದರೂ ಸಹ ನಾಲ್ವರು ಪತ್ರಕರ್ತರು ಸೇರಿ 26 ಜನರ ಹಣ,‌ ಮೊಬೈಲ್ ಕಳ್ಳತನವಾಗಿದ್ದು, ಈ ಬಗ್ಗೆ 26 ಜನರು ಕುಷ್ಟಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಭೆಯಲ್ಲಿ ಬಹಳಷ್ಟು ಜನಸಂಖ್ಯೆ ಸೇರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಸಮಾವೇಶಕ್ಕೆ ಆಗಮಿಸಿದ್ದವರ ಹಣ,‌ ಮೊಬೈಲ್ ಕಳ್ಳತನ ಮಾಡಿದ್ದಾರೆ.

Share This Article