ತ್ಯಾಜ್ಯ ನಿರ್ವಹಣೆ : ಕರ್ನಾಟಕ ಸರ್ಕಾರಕ್ಕೆ 2900 ರೂ. ದಂಡ  

khushihost
ತ್ಯಾಜ್ಯ ನಿರ್ವಹಣೆ : ಕರ್ನಾಟಕ ಸರ್ಕಾರಕ್ಕೆ 2900 ರೂ. ದಂಡ  

ಬೆಂಗಳೂರು : ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ಸರಕಾರ ವಿಫಲವಾದ ಕಾರಣ 2,900 ಕೋಟಿ ರೂ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ. ಎನ್ ಜಿ ಟಿ ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಘನ, ದ್ರವ ತ್ಯಾಜ್ಯದ ನಿರ್ವಹಣೆ ಸರಿಯಾಗಿ ಆಗಿಲ್ಲ, ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಅಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.  ಹಾನಿಯನ್ನು ಭವಿಷ್ಯದಲ್ಲಿ ತಡೆಗಟ್ಟುವ ಅಗತ್ಯವಿದೆ. ಹಿಂದಿನ ಹಾನಿಯನ್ನು ಮರುಸ್ಥಾಪಿಸಬೇಕಾಗಿದೆ. 2,900 ಕೋಟಿ ರೂ ಪರಿಹಾರ ನೀಡುವಂತೆ ಎನ್ ಜಿಟಿ ರಾಜ್ಯ ಸರ್ಕಾರಕ್ಕೆ ಆದೇಶವನ್ನು ನೀಡಿದೆ.

ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ ಕುಮಾರ ಗೋಯಲ್ ನೇತೃತ್ವದ ಪೀಠ ಈ ಆದೇಶವನ್ನು ನೀಡಿದ್ದು. ಈ ಹಿಂದೆ ಪಂಜಾಬ್ ಸರಕಾರ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ ಎಂದು 2000 ಕೋಟಿ ದಂಡ ವಿಧಿಸಿತ್ತು.

Share This Article