ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಕೂಲಿ ನೀಡಲಿಲ್ಲ : 40 ಕಾರ್ಮಿಕರಿಂದ ಪೊಲೀಸರಿಗೆ ದೂರು

khushihost
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಕೂಲಿ ನೀಡಲಿಲ್ಲ : 40 ಕಾರ್ಮಿಕರಿಂದ ಪೊಲೀಸರಿಗೆ ದೂರು

ಚಿಕ್ಕಬಳ್ಳಾಪುರ : ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೂಲಿಗಾಗಿ ಕರೆದುಕೊಂಡು ಬಂದಿದ್ದ 40 ಕಾರ್ಮಿಕರಿಗೆ ಹಣ ನೀಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿನ್ನೆ ನಡೆದ ಪ್ರಗತಿ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಕೂಲಿಗಾಗಿ ಕರೆದುಕೊಂಡು ಬಂದಿದ್ದ 40 ಕಾರ್ಮಿಕರಿಗೆ ಹಣ ನೀಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಕಾರ್ಯಕರ್ತ ನಂದೀಶ ಎನ್ನುವವರು 500 ರೂ ಕೂಲಿ ನೀಡುವುದಾಗಿ ಹೇಳಿದ್ದರು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಕೂಲಿ ಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆ, ಕೊನೆಗೆ 500 ರೂ ಬದಲು 100 ರೂ ಹಣ ಕೊಡಲು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ .

ಕೂಲಿ ಕಾರ್ಮಿಕರು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತ ನಂದೀಶ ವಿರುದ್ಧ ದೂರು ದಾಖಲಿಸಿದ್ದಾರೆ.

Share This Article