ಕಣಕುಂಬಿ ಚೆಕ್ ಪೋಸ್ಟದಲ್ಲಿ 8 ಲಕ್ಷ ರೂ. ವಶ

khushihost
ಕಣಕುಂಬಿ ಚೆಕ್ ಪೋಸ್ಟದಲ್ಲಿ  8 ಲಕ್ಷ ರೂ. ವಶ

ಬೆಳಗಾವಿ: ಖಾನಾಪೂರ ವಿಧಾನಸಭಾ ಕ್ಷೇತ್ರದ ಕಣಕುಂಬಿ ಚೆಕ್ ಪೋಸ್ಟದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 7.98 ಲಕ್ಷ ರೂಪಾಯಿಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಎಸ್ಎಸ್ ಟಿ ತಂಡದ ಅಧಿಕಾರಿಗಳಾದ ಮಲಗೌಡ ಪಾಟೀಲ ಅವರು ಶುಕ್ರವಾರ ಕಣಕುಂಬಿ ಚೆಕ್ ಪೋಸ್ಟದಲ್ಲಿ ಬೆಳಿಗ್ಗೆ ಕರ್ತವ್ಯದಲ್ಲಿದ್ದಾಗ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದ ಸಂಜಯ ಬಸವರಾಜ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ವಾಹನ (ಸಂಖ್ಯೆ ಕೆ.ಎ-29 ಎಫ್-1532) ತಪಾಸಣೆ ನಡೆಸಿದಾಗ ಅವರ ಬಳಿ ದಾಖಲೆ ಇಲ್ಲದ 7.98 ಲಕ್ಷ ರೂ ಪತ್ತೆಯಾಗಿವೆ. ಈ ವಾಹನವು ಗೋವಾದಿಂದ ಬೆಳಗಾವಿಗೆ ಹೋಗುತ್ತಿತ್ತು.

ಹಣದ ಬಗ್ಗೆ ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ಎಸ್ಎಸ್ ಟಿ ತಂಡದ ಅಧಿಕಾರಿಗಳು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿರುವ ಹಣವನ್ನು ಖಾನಾಪೂರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Share This Article