ಗುಂಬಜ್ ಮಾದರಿ ಕಟ್ಟಡಗಳು ಬೇಡವೇ ಬೇಡ -ಸೂಲಿಬೆಲೆ

khushihost
ಗುಂಬಜ್ ಮಾದರಿ ಕಟ್ಟಡಗಳು ಬೇಡವೇ ಬೇಡ -ಸೂಲಿಬೆಲೆ

ಬೆಂಗಳೂರು: ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್ ಗಳನ್ನು ತೆರವುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿತ್ತು. ಮೈಸೂರಿನ ಬಳಿಕ ಇದೀಗ ರಾಜಧಾನಿ ಬೆಂಗಳೂರಿಗೂ ಗುಂಬಜ್ ವಿವಾದ ಕಾಲಿಟ್ಟಿದೆ.

ಬೆಂಗಳೂರಿನ ಕೆಪಿಟಿಸಿಎಲ್ ವಿದ್ಯುತ್ ಸರಬರಾಜು ಕಟ್ಟಡ ಗುಂಬಜ್ ಮಾದರಿಯಲ್ಲಿದೆ ಎಂದು ಕೆಲವರು ಧ್ವನಿ ಎತ್ತಿದ್ದಾರೆ. ಕೆಪಿಟಿಸಿಎಲ್ ಕಟ್ಟಡದ ಚಾವಣಿ, ಕಂಬಗಳು ಹಾಗೂ ಗೋಪುರ ಗುಂಬಜ್ ಹಾಗೂ ಮಸೀದಿಗಳ ಮಾದರಿಯನ್ನು ಹೋಲುತ್ತಿದೆ. ಇದು ಅರೆಬಿಕ್ ಹಾಗೂ ಗುಂಬಜ್ ಆರ್ಕಿಟೆಕ್ಚರ್ ಬೆಳೆಸುವ ಹುನ್ನಾರ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

ಮಸೀದಿ ಶೈಲಿಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಸರ್ಕಾರಿ ಕಟ್ಟಡಗಳೇ ಈ ಶೈಲಿಗಳಲ್ಲಿ ನಿರ್ಮಾಣ ಮಾಡಿದರೆ ಹೇಗೆ. ಮೊದಲು ಇಂತಹ ಮಾದರಿಗಳನ್ನು ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article