ವಯಸ್ಸು ಮರೆಮಾಚಲು ಸಕ್ಕರೆ ಬದಲು ಬೆಲ್ಲ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ!

khushihost
ವಯಸ್ಸು ಮರೆಮಾಚಲು ಸಕ್ಕರೆ ಬದಲು ಬೆಲ್ಲ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ!

ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಲ್ಲದ ಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಚರ್ಮದ ಮೇಲೆ ಯಾವುದೇ ರೀತಿಯ ಅಲರ್ಜಿ ಅಥವಾ ದೇಹದ ಒಳ ಭಾಗದಲ್ಲಿ ಉಸಿರಾಟದ ತೊಂದರೆ, ಅಸ್ತಮಾ ಉಂಟಾಗದಂತೆ ನೋಡಿಕೊಳ್ಳುತ್ತದೆ. ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಸಾಕಷ್ಟಿದೆ.ಜಿಂಕ್ ಮತ್ತು ಸೆಲಿನಿಯಂ ಪ್ರಮಾಣ ಇರುವ ಕಾರಣ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತದೆ.

ಮುಖದ ಮೇಲಿನ ಮೊಡವೆಗಳನ್ನು ಮತ್ತು ಕಲೆಗಳನ್ನು ಇದು ಹೋಗಲಾಡಿಸುತ್ತದೆ. ಪ್ರತಿ ದಿನ ಊಟ ಆದ ಮೇಲೆ ಒಂದು ತುಂಡು ಬೆಲ್ಲ ಸೇವಿಸುವುದರಿಂದ ದೇಹದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮೆಟಬಾಲಿಸಂ ವೃದ್ಧಿಸುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳು ಹೊರ ಹೋಗಲು ಸಹಾಯವಾಗುತ್ತದೆ. ಚರ್ಮದ ಮೇಲೆ ಕಂಡುಬರುವ ಸುಕ್ಕುಗಳು, ಗೆರೆಗಳು ಅಥವಾ ವಯಸ್ಸಾದಂತೆ ಕಂಡು ಬರುವ ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ.

ಎರಡು ಟೀ ಚಮಚ ಜೇನುತುಪ್ಪ, ಒಂದು ಟೀ ಚಮಚ ನಿಂಬೆಹಣ್ಣಿನ ರಸ, ಎರಡು ಟೀ ಚಮಚ ಜಜ್ಜಿದ ಬೆಲ್ಲ ಎಲ್ಲವನ್ನು ಮಿಶ್ರಣ ಮಾಡಿ ನಯವಾದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖದ ಚರ್ಮದ ಮೇಲೆ ಹಚ್ಚಿ ಹತ್ತು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ನಂತರ ನೀರಿನಲ್ಲಿ ತೊಳೆದುಕೊಂಡರೆ ಹೊಳಪಿನ ಚರ್ಮ ನಿಮ್ಮದಾಗುತ್ತದೆ.

ಒಂದು ಟೇಬಲ್ ಚಮಚ ಬೆಲ್ಲದ ಪುಡಿ ತೆಗೆದುಕೊಂಡು ಅಷ್ಟೇ ಪ್ರಮಾಣದ ಟೊಮ್ಯಾಟೋ ಜ್ಯೂಸ್ ಜೊತೆಗೆ ಮಿಶ್ರಣ ಮಾಡಿ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸ, ಸ್ವಲ್ಪ ಅರಿಶಿನ ಪುಡಿ ಮಿಶ್ರಣ ಮಾಡಿ.ಮುಖದ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದುಕೊಂಡರೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಗೆ ಹೊಳಪು ನೀಡುತ್ತದೆ.

Share This Article