ಹೊರಟ್ಟಿ ಪರಿಷತ್ ನೂತನ ಸಭಾಪತಿ

khushihost
ಹೊರಟ್ಟಿ ಪರಿಷತ್ ನೂತನ ಸಭಾಪತಿ

ಬೆಳಗಾವಿ: ನಿರೀಕ್ಷೆಯಂತೆ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಬಿಜೆಪಿ ಸೇರಿರುವ ಎಂ ಎಲ್ ಸಿ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ.

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಹೊರಟ್ಟಿ ಅವರನ್ನು ಚುನಾಯಿಸುವಂತೆ ತೇಜಸ್ವಿನಿಗೌಡ, ಶಾಂತಾರಾಂ ಸಿದ್ದಿ, ವೈ ಎ ನಾರಾಯಣಸ್ವಾಮಿ ಮೊದಲಾದವರು ಪ್ರಸ್ತಾಪಕ್ಕೆ ಸೂಚಿಸಿದರು. ಪ್ರಸ್ತಾವಕ್ಕೆ ಅನುಮೋದಿಸಿದ ಆಯನೂರು ಮಂಜುನಾಥ, ಆರ್.ಶಂಕರ, ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್ ಪರಿಷತ್ ನೂತನ ಸಭಾಪತಿಯಾಗಿ ಹೊರಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಸಭಾ ನಾಯಕ, ಮುಖ್ಯಮಂತ್ರಿ ಬೊಮ್ಮಾಯಿ, ವಿರೋಧ ಪಕ್ಷ ನಾಯಕರು ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಿ ಸಭಾಧ್ಯಕ್ಷರ ಪೀಠದತ್ತ ಕರೆತಂದರು.

Share This Article