ಕರ್ನಾಟಕಕ್ಕೆ ನೀರು ಬಿಡುವ ಕುರಿತು ಮರು ಪರಿಶೀಲನೆ –ಮಹಾರಾಷ್ಟ್ರ ಸಚಿವರ ಬೆದರಿಕೆ

khushihost
ಕರ್ನಾಟಕಕ್ಕೆ ನೀರು ಬಿಡುವ ಕುರಿತು ಮರು ಪರಿಶೀಲನೆ –ಮಹಾರಾಷ್ಟ್ರ ಸಚಿವರ ಬೆದರಿಕೆ

ನಾಗಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದು ಮಹಾರಾಷ್ಟ್ರದ ಣೆಕಟ್ಟುಗಳಿಂದ ಕರ್ನಾಟಕಕ್ಕೆ ನೀರು  ಹರಿಸುವ ಬಗ್ಗೆ ಮರು ಪರಿಶೀಲಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.  

ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದೊಂದಿಗೆ ಸಮನ್ವಯತೆಗಾಗಿ ಕ್ಯಾಬಿನೆಟ್ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜ ದೇಸಾಯಿ ಅವರನ್ನು ನೋಡಲ್ ಸಚಿವರನ್ನಾಗಿ ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿತ್ತು

ಗಡಿ ವಿವಾದ ಮುಗಿದ ಕತೆಯಾಗಿದ್ದು, ಮಹಾರಾಷ್ಟ್ರಕ್ಕೆ ಒಂದು ಇಂಚು ಕೂಡಾ ಭೂಮಿ ನೀಡುವುದಿಲ್ಲ ಎಂಬ ನಿಲುವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಸದನದಲ್ಲಿ ಪುನರುಚ್ಚರಿಸಿದ್ದರು. ಮಹಾರಾಷ್ಟ್ರದ ಗಡಿ ಖ್ಯಾತೆ ಬಗ್ಗೆ ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಮಂಡಿಸಲು ಸಹ ತೀರ್ಮಾನಿಸಲಾಗಿತ್ತು. 

ವಿಧಾನಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಸಾಯಿ, ಇಂತಹ ಹೇಳಿಕೆಗಳು ಸಾಂವಿಧಾನಿಕ ಹುದ್ದೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಶೋಭೆ ತರುವುದಿಲ್ಲ. ಗಡಿ ವಿವಾದ ಕೋರ್ಟನಲ್ಲಿರುವಾಗ ಬೊಮ್ಮಾಯಿ ಅವರ ಇಂತಹ ಬೆದರಿಕೆ ಭಾಷೆ ಒಳ್ಳೆಯದಲ್ಲ.ಅದನ್ನು ಅವರು ನಿಲ್ಲಿಸಬೇಕು ಎಂದು ದೇಸಾಯಿ ಹೇಳಿದರು. ಮಹಾರಾಷ್ಟ್ರ ಕೂಡಾ ಇದೇ ಭಾಷೆಯಲ್ಲಿ ಪ್ರತಿಕ್ರಿಯಿಸಬಹುದು ಆದರೆ, ನಾವು ಪ್ರಚೋದಿಸುವುದಿಲ್ಲ ಎಂದರು.

ಬೇಸಿಗೆ ಅವಧಿಯಲ್ಲಿ ಕರ್ನಾಟಕ ಕೊಂಕಣ ಮತ್ತು ಕೃಷ್ಣ ಅಣೆಕಟ್ಟುಗಳ ನೀರಿನ ಹೆಚ್ಚಿನ ರೀತಿಯಲ್ಲಿ ಅವಲಂಬಿತರಾಗಿರುವುದನ್ನು ಬೊಮ್ಮಾಯಿ ಗಮನದಲ್ಲಿಟ್ಟುಕೊಳ್ಳಬೇಕು, ಇಂತಹ ಹೇಳಿಕೆ ನೀಡುವುದನ್ನು ಅವರುನಿಲ್ಲಿಸದಿದ್ದರೆ ಕರ್ನಾಟಕಕ್ಕೆ ನೀರು ಪೂರೈಕೆ ಬಗ್ಗೆ ಮಹಾರಾಷ್ಟ್ರ ಮರು ಚಿಂತಿಸಲಾಗುವುದು ಎಂದು ದೇಸಾಯಿ ಹೇಳಿದರು.

Share This Article