ಚೀನಾದಿಂದ ಆಗಮಿಸಿದ ವ್ಯಕ್ತಿ ಸೇರಿ ವಿದೇಶಗಳಿಂದ ಬಂದ 9 ಜನರಿಗೆ ಕೊರೋನಾ

khushihost
ಚೀನಾದಿಂದ ಆಗಮಿಸಿದ ವ್ಯಕ್ತಿ ಸೇರಿ ವಿದೇಶಗಳಿಂದ ಬಂದ 9 ಜನರಿಗೆ ಕೊರೋನಾ

ಬೆಳಗಾವಿ: ಚೀನಾದಿಂದ ಬೆಂಗಳೂರಿಗೆ ಆಗಮಿಸಿರುವ ವ್ಯಕ್ತಿಯೊಬ್ಬರು ಸೇರಿದಂತೆ 9 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಬೆಳಗಾವಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, ಕಳೆದ ಮೂರು ದಿನಗಳಲ್ಲಿ 9 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಏರಪೋರ್ಟಗೆ ಬಂದಿದ್ದ ಪ್ರಯಾಣಿಕರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ ಮಾಡಲಾಗಿತ್ತು. ಇದೀಗ 9 ಜನರಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದರು.

ಚೀನಾದಿಂದ ಆಗಮಿಸಿರುವ 35 ವರ್ಷದ ವ್ಯಕ್ತಿ ಹಾಗೂ ಆಗ್ರಾದಿಂದ ಬಂದಿರುವ 35 ವರ್ಷದ ವ್ಯಕ್ತಿ ಸೇರಿದಂತೆ ನಾಲ್ವರು ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸೋಲೇಟ್ ಮಾಡಲಾಗಿದ್ದು ಅವರ ಜಿನೊವಿಕ್ ಸೀಕ್ವೆನ್ಸ ವರದಿಗೆ ಕಾಯಲಾಗುತ್ತಿದೆ. ಉಳಿದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

Share This Article