೧೯೬ ಜನರಲ್ಲಿ ಇಂದು ಕೊರೋನಾ ಸೋಂಕು ಪತ್ತೆ

khushihost
೧೯೬ ಜನರಲ್ಲಿ ಇಂದು ಕೊರೋನಾ ಸೋಂಕು ಪತ್ತೆ

ಹೊಸದಿಲ್ಲಿ: ದೇಶದಲ್ಲಿ ಬಿಎಫ್.೭ ಹೊಸ ರೂಪಾಂತರಿ ವೈರಸ್ ಆತಂಕ ಎದುರಾಗಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 196 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ದೇಶದಲ್ಲಿ ಈ ವರೆಗೆ 530695 ಜನರು ಅಧಿಕೃತವಾಗಿ ಸರ್ಕಾರಿ ಮಾಹಿತಿ ಪ್ರಕಾರ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.  ದೇಶದಲ್ಲಿ 3428 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಈ ವರೆಗೆ 44143179 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ನಿನ್ನೆ 29,818 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 2,20,05,46,067 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 35,173 ಜನರಿಗೆ ಕೋವಿಡ್ ಟೆಸ್ಟ ಮಾಡಲಾಗಿದೆ.

Share This Article