ಮಲಗಿದ್ದ ಬಡಪಾಯಿ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು!

khushihost
ಮಲಗಿದ್ದ ಬಡಪಾಯಿ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು!

ಧಾರವಾಡ : ಬಡಪಾಯಿ ಭಿಕ್ಷುಕಿಯೊಬ್ಬಳನ್ನು ಬೀದಿ ನಾಯಿಗಳು ಎಳೆದಾಡಿ ಕಚ್ಚಿ ಕೊಂದು ಹಾಕಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

ಉಪ್ಪಿನ ಬೆಟಗೇರಿಯ ಖಬರಸ್ತಾನ ಬಳಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಭಿಕ್ಷುಕಿ ಖಬರಸ್ತಾನ ಬಳಿ ಮಲಗಿಕೊಂಡಿದ್ದ ವೇಳೆ ಸುಮಾರು 15-20 ಬೀದಿ ನಾಯಿಗಳು ಆಕೆಯ ಮೇಲೆ ದಾಳಿ ಮಾಡಿವೆ. ಅಲ್ಲದೇ ಆಕೆಯನ್ನು ಎಳೆದಾಡಿ ತೊಡೆ, ಕೈಗಳಿಗೆ ಬಲವಾಗಿ ಕಚ್ಚಿ ಗಾಯ ಮಾಡಿವೆ. ಇದರಿಂದ ಆ ಭಿಕ್ಷುಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಸಾವನ್ನಪ್ಪಿದ ದುರ್ದೈವಿ ಮಹಿಳೆಯ ಹೆಸರು, ವಿಳಾಸ ತಿಳಿದು ಬಂದಿಲ್ಲ.

ಘಟನೆಯನ್ನು ನೋಡಿದ ಸ್ಥಳೀಯರು ಗರಗ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಭಿಕ್ಷುಕಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Share This Article