ಬೆಂಗಳೂರು ರೇಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ಯಾದಗಿರಿ ಸ್ವಾಮಿಗಳು ಲಿಂಗೈಕ್ಯ

khushihost
ಬೆಂಗಳೂರು ರೇಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ಯಾದಗಿರಿ ಸ್ವಾಮಿಗಳು ಲಿಂಗೈಕ್ಯ

ಯಾದಗಿರಿ: ಬೆಂಗಳೂರಿನ ಕ್ಯಾಂಟೋನ್ಮೆಂಟ ರೇಲ್ವೆ ನಿಲ್ದಾಣದಲ್ಲಿ ಯಾದಗಿರಿಯ ವೀರಮಹಾಂತ ಶಿವಾಚಾರ್ಯ ಸ್ವಾಮೀಯವರಿಗೆ ಹೃದಯಾಘಾತವಾಗಿ ಗುರುವಾರ ಲಿಂಗೈಕ್ಯರಾದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಗೆ 48 ವರುಷ ವಯಸಾಗಿತ್ತು.

ಬೆಂಗಳೂರಿನ ಕ್ಯಾಂಟೋನ್ಮೆಂಟ ರೈಲ್ವೆ ನಿಲ್ದಾಣದಲ್ಲಿ ಸ್ವಾಮೀಜಿಯವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸ್ವಾಮೀಜಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಯಾದಗಿರಿಯ ಮಠಕ್ಕೆ ಸ್ವಾಮೀಜಿ ಹೊರಟಿದ್ದ. ಈ ಹಿನ್ನೆಲೆಯಲ್ಲಿ ಕ್ಯಾಂಟೋನ್ಮೆಂಟ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾದಿದ್ದರು. ಮುಂದಿನ ತಿಂಗಳು ತಮ್ಮ 25ನೇ ಪಟ್ಟಾಧಿಕಾರ ಮಹೋತ್ಸವ ಆಯೋಜನೆಗೆ ಸಿದ್ಧತೆ ನಡೆಸಿದ್ದ ಅವರು, ಕಾರ್ಯಕ್ರಮಕ್ಕೆ ವೈ. ವಿಜಯೇಂದ್ರ ಸೇರಿ ಗಣ್ಯರನ್ನು ಆಹ್ವಾನಿಸಲು ಬೆಂಗಳೂರಿಗೆ ಹೋಗಿದ್ದರು. ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ವಾಪಸ್ ಯಾದಗಿರಿಗೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ.

Share This Article