‌ಬೆಂಗಳೂರಿನಲ್ಲಿ ಹಣದ ಸುರಿಮಳೆ; ನೋಟುಗಳಿಗಾಗಿ ಮುಗಿ ಬಿದ್ದ ಜನರಿಂದ ಟ್ರಾಫಿಕ್‌ ಜಾಮ್

khushihost
‌ಬೆಂಗಳೂರಿನಲ್ಲಿ ಹಣದ ಸುರಿಮಳೆ; ನೋಟುಗಳಿಗಾಗಿ ಮುಗಿ ಬಿದ್ದ ಜನರಿಂದ ಟ್ರಾಫಿಕ್‌ ಜಾಮ್

ಬೆಂಗಳೂರುಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಆಕಾಶದಿಂದ ಹಣದ ಸುರಿಮಳೆಯೇ ಆಯಿತು. ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ ಕೆಆರ್‌ ಮಾರುಕಟ್ಟೆ ಫ್ಲೈ ಓವರ್‌ನಿಂದ ಹಣದ ಮಳೆ ಸುರಿದಿದ್ದು, ನೋಟುಗಳ ಈ ಮಳೆಯಿಂದ ಜನರು ಆಶ್ಚರ್ಯಚಕಿತರಾದರೆ ಕೆಲವರು ಹಣವನ್ನು ಆಯ್ದುಕೊಳ್ಳಲು ಮುಂದಾದರು.

ಬೆಂಗಳೂರಿನ ಕೆಆರ್‌ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎಸೆದನು.

ಆಕಾಶದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದುಕೊಳ್ಳಲು ಮುಂದಾದರು. ಇದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ವ್ಯಕ್ತಿಯ ವರ್ತನೆಯಿಂದ ಕೆಳಗೆ ಮಾತ್ರವಲ್ಲದೇ ಫ್ಲೈ ಓವರ್ ಮೇಲೂ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ವ್ಯಕ್ತಿ ತನ್ನ ಹೋಂಡಾ ಆಕ್ಟೀವಾ ಸ್ಕೂಟರ್ ಹತ್ತಿ ಅಲ್ಲಿಂದ ಹೋಗಿದ್ದಾನೆ. ‌

ಈ ವ್ಯಕ್ತಿ ಹಣ ಎರಚುತ್ತಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ವ್ಯಕ್ತಿ ಫ್ಲೈ ಓವರ್ ಮೇಲಿಂದ 10 ರೂ. ನೋಟುಗಳಿರುವ ಕಂತೆ ಹಣವನ್ನು ತೂರಿ ಹೋಗಿದ್ದಾನೆ. ವಿಡಿಯೋದಲ್ಲಿ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾನೆ.

ಸೂಟು ಬೂಟು ಹಾಕಿಕೊಂಡು ಬೇಕಾಬಿಟ್ಟಿ ಹಣ ಎಸೆದು ಹೋದ ವ್ಯಕ್ತಿ ವೃತ್ತಿಯಲ್ಲಿ ಬೆಂಗಳೂರಿನ ನಾಗರಬಾವಿಯ ನಿವಾಸಿ ಅರುಣ ಎಂಬವ ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿದ್ದಾರೆ. ಅರುಣ ವಿ ಡಾಟ್ 9 ಇವೆಂಟ್‌ನ ಸಿಇಓ ಆಗಿದ್ದಾರೆ. ಅರುಣ್ ವಿವಿಧ ಕಾರ್ಯಕ್ರಮಗಳಿಗೆ ಇವೆಂಟ್ ಆಯೋಜನೆ ಮಾಡುತ್ತಿದ್ದರು.

ಕೆ.ಆರ್. ಮಾರುಕಟ್ಟೆ ಫ್ಲೈ ಓವರ್ ಮೇಲೆ ಹಣ ಎಸೆದ ಅರುಣ ವಿರುದ್ಧ ಕೆ.ಆರ್.ಮಾರ್ಕೆಟ್ ಪೊಲೀಸರು ಎನ್‌ಸಿಆರ್ ದಾಖಲು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಿದ್ದು ಯಾಕೆ ಅನ್ನುವ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದಾರೆ.

Share This Article