ಬೆಳಗಾವಿಯಲ್ಲಿ ಪ್ರಧಾನಿಯ ಅದ್ಧೂರಿ ರೋಡ್ ಶೋ

khushihost
ಬೆಳಗಾವಿಯಲ್ಲಿ ಪ್ರಧಾನಿಯ ಅದ್ಧೂರಿ ರೋಡ್ ಶೋ

ಬೆಳಗಾವಿ, 27- ಸೋಮವಾರ ಸುಮಾರು 10.ಕಿ.ಮೀ ಗಳಿಗೂ ಅಧಿಕ ಮಾರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು.

ನಗರದ ಕೆ.ಎಸ್.ಆರ್.ಪಿ ಮೈದಾನದಿಂದ ಅರಂಭವಾದ ಪ್ರಧಾನಮಂತ್ರಿಗಳ ರೋಡ್ ಶೋ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ನಗರದ ಹೊರವಲಯದ ಮಾಲಿನಿ ಸಿಟಿ ಮೈದಾನದವರೆಗೆ ನಡೆಯಿತು.

ದಾರಿಯುದ್ದಕ್ಕೂ ಅಪಾರ ಜನಸ್ತೋಮ ಸಾಗರೋಪಾದಿಯಲ್ಲಿ ನೆರೆದು ಪ್ರಧಾನಮಂತ್ರಿಗಳನ್ನು ಹರ್ಷೋದ್ಘಾರಗಳಿಂದ ಸ್ವಾಗತಿಸಿದರು.

ಪ್ರಮುಖ ವೃತ್ತಗಳಲ್ಲಿ ಪುಷ್ಪಾರ್ಚನೆಗೈದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರು ಜಯಕಾರ ಹಾಕಿದರು.

Share This Article