ಅಧಿವೇಶನದ ವೇಳೆ ಬ್ಲ್ಯೂ ಫಿಲ್ಮ ವೀಕ್ಷಿಸಿದ ಬಿಜೆಪಿ ಶಾಸಕ

khushihost
ಅಧಿವೇಶನದ ವೇಳೆ ಬ್ಲ್ಯೂ ಫಿಲ್ಮ ವೀಕ್ಷಿಸಿದ ಬಿಜೆಪಿ ಶಾಸಕ

ಅಗರ್ತಲಾತ್ರಿಪುರಾ ಬಿಜೆಪಿ ಶಾಸಕ ಜದಾಬ ಲಾಲ ನಾಥ ಅವರು ರಾಜ್ಯ ವಿಧಾನಸಭೆ ಅಧಿವೇಶನದ ವೇಳೆ ನೀಲಿ ಚಿತ್ರ ವೀಕ್ಷಣೆ ಮಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಾಗಬಾಸ್ ಕ್ಷೇತ್ರದ ಶಾಸಕ ಜಬಾದ ಅವರು ರಾಜ್ಯದ ಮಹತ್ವದ ಮುಂಗಡಪತ್ರ ಅಧಿವೇಶನದ ಸಂದರ್ಭದಲ್ಲಿ ತಮ್ಮ ಮೊಬೈಲ್ನಲ್ಲಿ ಬ್ಲ್ಯೂ ಫಿಲ್ಮ ನೋಡುತ್ತ ಕುಳಿತಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಜನಪ್ರತಿನಿಧಿಗಳು ಸಾರ್ವಜನಿಕ ಪವಿತ್ರ ವೇದಿಕೆಗಳಲ್ಲಿ ರೀತಿ ಸಿಕ್ಕಿ ಬೀಳುತ್ತಿರುವುದು ಇದೇ ಮೊದಲಲ್ಲ. 2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಬ್ಬರು ಸಚಿವರು ರಾಜ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗಲೇ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರು.

Share This Article