ಡಿಸಿಸಿ ಬ್ಯಾಂಕ್ ಸಾಗಿಸುತ್ತಿದ್ದ ₹ 5 ಕೋಟಿ ವಶ

khushihost
ಡಿಸಿಸಿ ಬ್ಯಾಂಕ್ ಸಾಗಿಸುತ್ತಿದ್ದ ₹ 5 ಕೋಟಿ ವಶ

ಗೋಕಾಕ : ಚುನಾವಣಾ ಆಯೋಗದ ಮಾರ್ಗಸೂಚಿ ಪಾಲಿಸದೇ ಡಿಸಿಸಿ ಬ್ಯಾಂಕ್ ನಿಂದ ವಾಹನದಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿಗಳನ್ನು ಗೋಕಾಕ ತಾಲೂಕಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಬೆಳಗಾವಿಯ ಮುಖ್ಯ ಕೇಂದ್ರದಿಂದ ಈ ಹಣವನ್ನು ಸಾಗಿಸುತ್ತಿದ್ದಾಗ ಗೋಕಾಕ ತಾಲೂಕಿನ ಯದ್ದಲಗುಡ್ಡ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಎಫ್ ಎಸ್ ಟಿ ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚುನಾವಣೆ ಹಿನ್ನಲೆಯಲ್ಲಿ ಹಣವನ್ನು ಸಾಗಿಸಲು ಚುನಾವಣಾ ಆಯೋಗದ ಸಕ್ಷಮ ಪ್ರಾಧಿಕಾರ ಕೆಲವು ಮಾರ್ಗಸೂಚಿ ರೂಪಿಸಿದೆ. ಆದರೆ ಮಾರ್ಗಸೂಚಿ ಪಾಲಿಸದೇ ಹಣವನ್ನು ಡಿಸಿಸಿ ಬ್ಯಾಂಕ್ ಸಾಗಿಸುತ್ತಿತ್ತು.

ವಶ ಪಡೆದ ಹಣವನ್ನು ಗೋಕಾಕ ಉಪ ಖಜಾನೆಯಲ್ಲಿಡಲಾಗಿದೆ.

Share This Article