ಮತ್ತೊಂದು ವಿಮಾನ ಪತನ; ಹೊತ್ತಿ ಉರಿದ ವಿಮಾನ

khushihost
ಮತ್ತೊಂದು ವಿಮಾನ ಪತನ; ಹೊತ್ತಿ ಉರಿದ ವಿಮಾನ

ಚಾಮರಾಜನಗರ : ಬೆಳಗಾವಿ ತಾಲೂಕಿನಲ್ಲಿ ಭಾರತೀಯ ವಾಯು ಸೇನೆಯ ವಿಮಾನ ಪತನವಾದ ಘಟನೆ ನಡೆದ ಎರಡೇ ದಿನಗಳಲ್ಲಿ ಚಾಮರಾಜನಗರದ ಬೊಗಪುರ ಎಂಬಲ್ಲಿ ಮತ್ತೊಂದು ಲಘು ವಿಮಾನ ಪತನಗೊಂಡಿದೆ.

ಹಾರಾಟದಲ್ಲಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಇಬ್ಬರೂ ಪೈಲೆಟ್ ಗಳು ಪ್ಯಾರಾಶೂಟ್ ಬಳಸಿ ಸುರಕ್ಷಿತವಾಗಿ ಭೂಮಿಗೆ ತಲುಪಿದ್ದಾರೆ. ಆದರೆ ಅತೀ ವೇಗದಲ್ಲಿ ಭೂಮಿಗೆ ಅಪ್ಪಳಿಸಿದ ವಿಮಾನದ ಫ್ಯೂಲ್ ಟ್ಯಾಂಕ್ ಒಡೆದು ವಿಮಾನಕ್ಕೆ ಬೆಂಕಿ ತಗುಲಿ ಭಸ್ಮವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಕಳೆದ ಮಂಗಳವಾರ ಭಾರತೀಯ ವಾಯು ಸೇನೆಗೆ ಸೇರಿದ ಪೈಲೆಟ್ ಗಳ ತರಬೇತು ಲಘು ವಿಮಾನ ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದ ಹೊಲವೊಂದರಲ್ಲಿ ಬಿದ್ದಿತ್ತು ಅದರಲ್ಲಿದ್ದ ಇಬ್ಬರೂ ಪೈಲೆಟ್ ಗಳು ಸುರಕ್ಷಿತವಾಗಿದ್ದ ಘಟನೆ ಇಲ್ಲಿ ನೆನೆಸಿಕೊಳ್ಳಬಹುದು.

Share This Article