ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೋಸ್ಟ ಹಾಕಿದರೆ ಕಾನೂನು ಕ್ರಮ : ಎಸ್ ಪಿ

khushihost
ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೋಸ್ಟ ಹಾಕಿದರೆ ಕಾನೂನು ಕ್ರಮ : ಎಸ್ ಪಿ

ಬೆಳಗಾವಿ : ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸುವ ಪೋಸ್ಟ ಹಾಕಿದ್ದಕ್ಕೆ ನೆರೆಯ ಕೊಲ್ಲಾಪುರ ನಗರ ಉದ್ವಿಗ್ನಗೊಂಡಿದ್ದು ಇಂತಹ ಪ್ರಕರಣಗಳು ಬೆಳಗಾವಿಯಲ್ಲಿ ನಡೆಯಕೂಡದು. ಹಾಗಾಗಿ ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್​ದಲ್ಲಿ ವಿವಾದಿತ ಪೋಸ್ಟ್, ಸ್ಟೇಟಸ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಪೊಲೀಸ್ ವರಿಷ್ಠ ಸಂಜೀವ ಪಾಟೀಲ​ ಎಚ್ಚರಿಕೆ ನೀಡಿದ್ದಾರೆ.

ಜಾಲತಾಣಗಳ ಪೋಸ್ಟ ಕುರಿತು ಪೊಲೀಸರು ಗಮನ ಹರಿಸುತ್ತಿದ್ದಾರೆ. ಎಚ್ಚರಿಕೆ ಉಲಂಘಿಸಿದರೆ ಐಪಿಸಿ ಕಲಂ 153ಎ, 295 ಎ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಪ್ಪಾಣಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು​​, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

Share This Article