ಗೋಕಾಕ ಫಾಲ್ಸ ತೂಗು ಸೇತುವೆ ಮೇಲೆ ಸಂಚಾರ ನಿರ್ಬಂಧ; ವಿಠ್ಠಲ ಮಂದಿರ ಮುಳುಗಡೆ

khushihost
ಗೋಕಾಕ ಫಾಲ್ಸ ತೂಗು ಸೇತುವೆ ಮೇಲೆ ಸಂಚಾರ ನಿರ್ಬಂಧ; ವಿಠ್ಠಲ ಮಂದಿರ ಮುಳುಗಡೆ

ಗೋಕಾಕ, ೧೯- ಮಳೆ ಇಲ್ಲದೇ ಬತ್ತಿದ್ದ ಗೋಕಾಕ ಫಾಲ್ಸ್ ಗೆ ಘಟಪ್ರಭಾ ನದಿಯಿಂದ ನೀರು ಹರಿದು ಬರುತ್ತಿದ್ದು ಇಲ್ಲಿನ ತೂಗು ಸೇತುವೆಯ ಮೇಲೆ ಜನ, ಜಾನುವಾರುಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮೇಲಿನ ಪ್ರದೇಶಗಳು ಮತ್ತು ಗೋಕಾಕ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಗೋಕಾಕ ಜಲಪಾತದ ತೂಗು ಸೇತುವೆ ಮೇಲೆ ಪೊಲೀಸ್ ಇಲಾಖೆ ಸಂಚಾರ ನಿರ್ಬಂಧ ವಿಧಿಸಿದೆ.

ಕಳೆದ ಸುಮಾರು ಒಂದೂವರೇ ತಿಂಗಳಿನಿಂದ ಕಂಡು ಬರುತ್ತಿದ್ದ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ವಿಠ್ಠಲ ಮಂದಿರ ಇಂದು ಬುಧವಾರ ಪುನಃ ಜಲಾವೃತವಾಗಿದೆ.

ನೀರಿಲ್ಲದೇ ಜಲಾಶಯ ಸಂಪೂರ್ಣ ಬತ್ತಿ ಹೋಗಿದ್ದರಿಂದ ಹನ್ನೆರಡು ವರುಷದ ನಂತರ ದೇವಸ್ಥಾನಕ್ಕೆ ಹೋಗುವ ಅವಕಾಶ ಪಡೆದಿದ್ದ ಭಕ್ತರು ನಿನ್ನೆ ಮಂಗಳವಾರ ಇದ್ದರಿಂದ ಪೂಜೆ ಕೈಕೊಂಡಿದ್ದರು. ಸತತ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ಈ ದೇವಸ್ಥಾನ ಪುನಃ ಮುಳುಗುವ ಹಂತಕ್ಕೆ ಬಂದಿದೆ.

Share This Article