ರಕ್ಕಸಕೊಪ್ಪ ಜಲಾಶಯ ಭರ್ತಿ; ಹಿಡಕಲ್ ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುಗಡೆ

khushihost
ರಕ್ಕಸಕೊಪ್ಪ ಜಲಾಶಯ ಭರ್ತಿ; ಹಿಡಕಲ್ ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುಗಡೆ

ಬೆಳಗಾವಿ : ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಜಲಾಶಯದ ಐದೂ ಕ್ರೆಸ್ಟ್ ಗೇಟ್ ಗಳನ್ನು ಒಂದೂವರೇ ಅಡಿಗಳಷ್ಟು ತೆರೆದು ನೀರನ್ನು ಮಾರ್ಕಂಡೇಯ ನದಿಗೆ ಗುರುವಾರದಿಂದ ಬಿಡಲಾಗುತ್ತಿದೆ. ಹಾಗಾಗಿ ಹುಕ್ಕೇರಿ ತಾಲ್ಲೂಕಿನಲ್ಲಿರುವ ಹಿಡಕಲ್ ಜಲಾಶಯದ ನೀರಿನ ಮಟ್ಟದಲ್ಲಿ ತೀವ್ರ ಹೆಚ್ಚಳವಾಗುತ್ತಿದೆ.

ಕೇವಲ ಹತ್ತೇ ದಿನಗಳ ಹಿಂದೆ ಒಣಗಿ, ಬತ್ತಿ ಬರಿದಾಗಿದ್ದ 0.7-ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ಕಳೆದ ಮಂಗಳವಾರವೇ ಭರ್ತಿಯಾಗಿದೆ. ಹಾಗಾಗಿ ಜಲಾಶಯದ ಎಲ್ಲ ಕ್ರೆಸ್ಟ್ ಗೇಟ್ ಗಳನ್ನು 3- ಇಂಚ ವರೆಗೆ ತೆರೆದು ನೀರನ್ನು ಮಾರ್ಕಂಡೇಯ ನದಿಗೆ ಬಿಡಲಾಗುತಿತ್ತು. ಆದರೆ ನೀರಿನ ಸಂಗ್ರಹ ಹೆಚ್ಚುತ್ತಿದ್ದರಿಂದ ಗುರುವಾರ ಮುಂಜಾನೆಯಿಂದ ಜಲಾಶಯದ ಐದೂ ಕ್ರೆಸ್ಟ್ ಗೇಟ್ ಗಳನ್ನು ಒಂದೂವರೆ ಎತ್ತರಕ್ಕೆ ಏರಿಸಿ ಮಾರ್ಕಂಡೇಯ ನದಿಗೆ ನೀರು ಬಿಡಲಾಗುತ್ತಿದೆ.

ಜಲಾಶಯದಲ್ಲಿ ಹೆಚ್ಚು ಹೂಳು ಸಂಗ್ರಹವಾಗಿರುವುದರಿಂದ ನೀರು ಸಂಗ್ರಹದ ಮಟ್ಟ ಕಡಿಮೆಯಾಗಿದೆ. ಜಲಾಶಯ ಭರ್ತಿಯಾಗಿದ್ದರೂ 7 ಲಕ್ಷ ಜನಸಂಖ್ಯೆಯ ಬೆಳಗಾವಿ ನಗರಕ್ಕೆ ಕೇವಲ 6 ತಿಂಗಳು ಮಾತ್ರ ನೀರು ಪೂರೈಸಬಹುದಾಗಿದೆ ಎಂದು ನಗರಕ್ಕೆ ನೀರು ಪೂರೈಸುವ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ ಎಲ್ ಆಂಡ್ ಟಿ ತಿಳಿಸಿದೆ.

Share This Article