ನರ್ಸಗಳ ಬಗ್ಗೆ ಅವಹೇಳನಕಾರಿ ರೀಲ್ಸ; 15 ಎಂಬಿಬಿಎಸ್ ವಿದ್ಯಾರ್ಥಿಗಳು ಅಮಾನತ್ತು

khushihost
ನರ್ಸಗಳ ಬಗ್ಗೆ ಅವಹೇಳನಕಾರಿ ರೀಲ್ಸ; 15 ಎಂಬಿಬಿಎಸ್ ವಿದ್ಯಾರ್ಥಿಗಳು ಅಮಾನತ್ತು

ಹುಬ್ಬಳ್ಳಿ, ೮- ನರ್ಸ‌ಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದಕ್ಕಾಗಿ ಕರ್ನಾಟಕ ಇನ್ಸಟಿಟ್ಯೂಟ ಮತ್ತು ಮೆಡಿಕಲ್ ಸೈನ್ಸ (ಕಿಮ್ಸ್) ನ 15 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.

ಅಲ್ಲದೇ ವಿಡಿಯೋದ ಕುರಿತು ವಿಚಾರಣೆ ನಡೆಸಲು ಏಳು ಸದಸ್ಯರ ಸಮಿತಿ ರಚಿಸಲಾಗಿದೆ. ನರ್ಸಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ ಮಾಡಿದ್ದ ಕಿಮ್ಸ ಎಂಬಿಬಿಎಸ್ ವಿದ್ಯಾರ್ಥಿಗಳು, ಭದ್ರ ಚಿತ್ರದ ಹಾಡಿಗೆ ರೀಲ್ಸ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದು ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ನರ್ಸಗಳು ತಮ್ಮನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಕಿಮ್ಸ ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದರು ಹಾಗೂ ರೀಲ್ಸ ಮಾಡಿದ್ದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಿಮ್ಸ ನಿರ್ದೇಶಕರು ಮತ್ತು ಆಡಳಿತ ಮಂಡಳಿಯವರನ್ನು ಆಗ್ರಹಿಸಿದ್ದರು.

ನಿರ್ದೇಶಕರು ಕಾಲೇಜಿನ 15 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತರಗತಿಗಳಿಂದ ಅಮಾನತು ಮಾಡಿದ್ದಾರೆ. ಜೊತೆಗೆ ಇದರ ವಿಚಾರಣೆಗಾಗಿ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಅಧ್ಯಕ್ಷತೆಯಲ್ಲಿ ಏಳು ಜನ ಸದಸ್ಯರ ಸಮಿತಿ ರಚಿಸಿದ್ದು, ಆಗಸ್ಟ್‌ 11ರೊಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ರೀಲ್ಸ್‌ ಮಾಡಿದ್ದು ತೀವ್ರ ಟೀಕೆಗೆ ಗುರಿಯಾದ ನಂತರ, ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತೊಂದು ವೀಡಿಯೊ ಮಾಡಿ ನರ್ಸ್‌ಗಳನ್ನು ಕ್ಷಮೆಯಾಚಿಸಿದರು. ಅಲ್ಲದೆ ಇದನ್ನು ತಮಾಷೆಗಾಗಿ ಮಾಡಿದ್ದಾಗಿ ಹೇಳಿ ವೀಡಿಯೊ ಮೂಲಕ ಕ್ಷಮೆ ಕೋರಿದ್ದಾರೆ.

Share This Article