ರಮೇಶ ಜಾರಕಿಹೊಳಿ-ಕುಮಾರಸ್ವಾಮಿ ಭೇಟಿ

khushihost
ರಮೇಶ ಜಾರಕಿಹೊಳಿ-ಕುಮಾರಸ್ವಾಮಿ ಭೇಟಿ

ಬೆಂಗಳೂರು, 18- ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮಂಗಳವಾರ ಕುಮಾರಸ್ವಾಮಿ ದೆಹಲಿಗೆ ಹೊರಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಜೆಪಿ ನಗರದಲ್ಲಿರುವ ನಿವಾಸದಲ್ಲಿ ಜಾರಕಿಹೊಳಿ ಭೇಟಿಯಾದರು. ನಂತರ ಶಾಸಕ ರಮೇಶ ಜಾರಕಿಹೊಳಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿಯ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.

ಆದಷ್ಟು ಬೇಗ ಮೈತ್ರಿ ಆದರೆ ಒಳ್ಳೆಯದಾಗುತ್ತದೆ. ಈಗಿರುವ ಸರ್ಕಾರ ಬೀಳಿಸುವುದನ್ನು ಈಗ ಹೇಳಲು ಆಗುವುದಿಲ್ಲ. ನಮ್ಮ ಮೈತ್ರಿಯಿಂದ ಈ ಕೆಟ್ಟ ಸರ್ಕಾರ ತೆಗೆಯಲು ಮುಂದಿನ ಹೋರಾಟ ಮಾಡಲು ಶಕ್ತಿ ಬರುತ್ತದೆ. ಕುಮಾರಸ್ವಾಮಿ ಅವರು ಮೊದಲಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ರಮೇಶ ಹೇಳಿದರು.

Share This Article