ಕರ್ತವ್ಯದಲ್ಲಿ ಮದ್ಯ ಸೇವಿಸಿದ್ದ ಪೊಲೀಸರು ಅಮಾನತು

khushihost
ಕರ್ತವ್ಯದಲ್ಲಿ ಮದ್ಯ ಸೇವಿಸಿದ್ದ ಪೊಲೀಸರು ಅಮಾನತು

ಚಿಕ್ಕೋಡಿ, ೨೩:  ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ “112 ಪೊಲೀಸ್ ವಾಹನ” ದ ಕರ್ತವ್ಯ ನಿರತ ಇಬ್ಬರು ಪೊಲೀಸರು ಪೊಲೀಸ ಸಮವಸ್ತ್ರದಲ್ಲೇ ಮದ್ಯಪಾನ ಮಾಡಿದ್ದು, ಇಲಾಖೆ ಅವರನ್ನು ಅಮಾನತು ಮಾಡಿದೆ.

ಕೆಎ 22 ಜಿ 1818 ಸಂಖ್ಯೆಯ 112 ವಾಹನದ ಪೊಲೀಸ್ ಕಾನ್ಸಟೇಬಲ್ ಮತ್ತು ಧುಮಾಳ ಅಮಾನತ್ತುಗೊಂಡವರು.

ಕರ್ತವ್ಯದಲ್ಲಿದ್ದಾಗಲೇ ಮದ್ಯ ಸೇವಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ ಗುಳೇದ ಅವರು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದ ರಸ್ತೆಯಲ್ಲಿ ಸರ್ಕಾರಿ ವಾಹನ ನಿಲ್ಲಿಸಿ ಮದ್ಯ ಮಾಂಸ ಸೇವಿಸಿದ್ದರು ಎನ್ನಲಾಗಿದೆ.

Share This Article