ಹೆಲ್ಮೆಟ್ ಧರಿಸದ ಮುಖ್ಯ ಪೇದೆ ಅಮಾನತ್ತು

khushihost
ಹೆಲ್ಮೆಟ್ ಧರಿಸದ ಮುಖ್ಯ ಪೇದೆ ಅಮಾನತ್ತು

ಗೋಕಾಕ, ಜ. ೧ : ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ.

ಸ್ವತಃ ಪೊಲೀಸರೇ ಹೆಲ್ಮೆಟ್ ಹಾಕುವುದಿಲ್ಲ ಎಂಬ ಹಲವಾರು ದೂರುಗಳಿಂದ ಮುಜುಗರಕ್ಕೀಡಾಗಿದ್ದ ಪೊಲೀಸ್ ಮುಖ್ಯಾಧಿಕಾರಿಗಳು, ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಆದೇಶ ನೀಡಿದ್ದರು. ಆದರೆ ಗೋಕಾಕ ಠಾಣೆಯ ಹೆಡ್ ಕಾನಸ್ಟೇಬಲ್ ಈ ಆದೇಶ
ಉಲಂಘಿಸಿದ್ದರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಶಂಕರ ಗುಳೇದ ಅವರು ಪೇದೆಯನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

Share This Article