ತೆರೆದ ಕೊಳವೆ ಬಾವಿಗೆ ಬಿದ್ದ ಮಗು

khushihost
ತೆರೆದ ಕೊಳವೆ ಬಾವಿಗೆ ಬಿದ್ದ ಮಗು

ಇಂಡಿ, ಎ. 3: ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾ. ಲಚ್ಚಾಣ ಗ್ರಾಮದಲ್ಲಿ ನಡೆದಿದೆ.

ಎರಡು ವರ್ಷದ ಮಗು ಸಾತ್ವೀಕ ಮುಜಗೊಂಡ ಆಟವಾಡುವ ಸಂದರ್ಭದಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದೆ. ಬೆಳೆಗೆ ನೀರು ಹಾಯಿಸುವ ಉದ್ದೇಶದಿಂದ ಮಗುವಿನ ತಂದೆ ಸತೀಶ್ ಎಂಬುವವರ ತೋಟದಲ್ಲಿ ಬಾವಿ ಕೊರೆಯಲಾಗಿತ್ತು.

ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಹಾಗೂ  ಪೊಲೀಸರು ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಜೆಸಿಬಿ ಮೂಲಕ ಗುಂಡಿ ತೊಡುವ ಕಾರ್ಯವು ನಡೆಯುತ್ತಿದೆ. ಜೊತೆಗೆ ಮಗುವಿಗೆ ಆಕ್ಸಿಜನ್ ಪೂರೈಕೆ ಕೂಡಾ ಮಾಡಲಾಗುತ್ತಿದೆ.

Share This Article