ಐಸ್ ಕ್ರೀಮ ಸೇವಿಸಿ ಸತ್ತ ಅವಳಿ ಮಕ್ಕಳ ಪ್ರಕರಣಕ್ಕೆ ಹೊಸ ತಿರುವು

khushihost
ಐಸ್ ಕ್ರೀಮ ಸೇವಿಸಿ ಸತ್ತ ಅವಳಿ ಮಕ್ಕಳ ಪ್ರಕರಣಕ್ಕೆ ಹೊಸ ತಿರುವು

ಶ್ರೀರಂಗಪಟ್ಟಣ, ಎ.19:  ತಾಲೂಕಿನ ಬೆಟ್ಟಹಳ್ಳಿಯಲ್ಲಿ ಬುಧವಾರ  ಐಸ್‌ ಕ್ರೀಮ ತಿಂದು ಒಂದೂವರೆ ವರ್ಷದ ಅವಳಿ ಮಕ್ಕಳ ಸಾವು ಹಾಗೂ ತಾಯಿ ಅಸ್ವಸ್ಥಳಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಕ್ಕಳನ್ನು ತಾಯಿಯೇ ಕೊಂದಿರುವ ಆತಂಕಕಾರಿ ಸಂಗತಿ ಅರೆಕೆರೆ ಠಾಣೆ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಪೂಜಾ (22)  ತನ್ನಿಬ್ಬರು ಅವಳಿ ಮಕ್ಕಳಾದ ತ್ರಿಶೂಲ್‌ ಹಾಗೂ ತನಿಷಾಗೆ ಕೀಟನಾಶಕ ಬೆರೆಸಿದ್ದ ಐಸ್‌ ಕ್ರೀಮ  ನೀಡಿದ್ದಳು. ಬಳಿಕ ತಾನೂ ಸಹ ಐಸ್‌ ಕ್ರೀಮ ಸೇವಿಸಿದ್ದಳು. ಐಸ್‌ ಕ್ರೀಮ ಸೇವನೆ ಬಳಿಕ ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಮೃತಪಟ್ಟಿದ್ದರು. ಅಸ್ವಸ್ಥಳಾಗಿದ್ದ ತಾಯಿ ಪೂಜಾಳನ್ನು ಚಿಕಿತ್ಸೆಗಾಗಿ ಮಿಮ್ಸ‌ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕೌಟುಂಬಿಕ ಕಲಹಕ್ಕೆ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಪೂಜಾ ಒಪ್ಪಿಕೊಂಡಿದ್ದಾಳೆ.

Share This Article