ಜಾತ್ರೆಯಲ್ಲಿ ಪ್ರಸಾದ ಸೇವನೆ; 51 ಜನ ಅಸ್ವಸ್ಥ

khushihost
ಜಾತ್ರೆಯಲ್ಲಿ ಪ್ರಸಾದ ಸೇವನೆ; 51 ಜನ ಅಸ್ವಸ್ಥ

ಸವದತ್ತಿ, ಮೇ 22:   ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ 51 ಜನ ಅಸ್ವಸ್ಥಗೊಂಡಿದ್ದು ಅವರಲ್ಲಿ 5 ಜನ ತೀವ್ರವಾಗಿ ಬಳಲುತ್ತಿದ್ದು ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ನ ಪ್ರಸಾದದ ನಂತರ ಮಾವಿನ ಹಣ್ಣಿನ ಶೀಖರಣಿ ಸೇವಿಸಿದ್ದ ಜನರಲ್ಲಿ ಬಹುತೇಕರು ಏಕಾಏಕಿ ವಾಂತಿ-ಬೇಧಿಯಿಂದ ಬಳಲಿದರ ಕೂಡಲೇ ಅಸ್ತವ್ಯಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗ್ರಾಮದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದು ಕ್ಯಾಂಪ್ ಕ್ಯಾಂಪ್ ತೆರೆದು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ವೈದ್ಯಕೀಯ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದರು. ಅಸ್ವಸ್ಥಗೊಂಡ ಎಲ್ಲರೂ ಗುಣವಾಗುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Share This Article