ಅನಮೋಡ ಬಳಿ ಗುಡ್ಡ ಕುಸಿದು ಬೆಳಗಾವಿ-ಗೋವಾ ರಸ್ತೆ ಬಂದ್

khushihost
ಅನಮೋಡ ಬಳಿ ಗುಡ್ಡ ಕುಸಿದು ಬೆಳಗಾವಿ-ಗೋವಾ ರಸ್ತೆ ಬಂದ್

ಪಣಜಿ, ಜುಲೈ ೧೮: ಭಾರಿ ಮಳೆಯಿಂದಾಗಿ ಗುರುವಾರ ಬೆಳಗಿನ ಜಾವ ಗೋವಾದ ಅನಮೋಡ ಘಾಟ್ ಸಮೀಪ ಗುಡ್ಡ ಕುಸಿದು ಅನಮೋಡ ಘಾಟದಿಂದ ಕರ್ನಾಟಕದ ಬೆಳಗಾವಿ ಮತ್ತು ಖಾನಾಪುರಕ್ಕೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಗೋವಾದ ಅನಮೋಡ ಘಾಟ್ ಪ್ರದೇಶದ ಶ್ರೀ ದೂಧಸಾಗರ ದೇವಸ್ಥಾನದ ಬಳಿ ಭಾರಿ ಗುಡ್ಡ ಕುಸಿದಿದ್ದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯಿಂದ ರಸ್ತೆ ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಗೋವಾದಲ್ಲಿಆರೆಂಜ ಅಲರ್ಟಘೋಷಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಗೋವಾದ ಎರಡೂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು ಹವಾಮಾನ ಇಲಾಖೆಯು ಪ್ರಕಾರ ದಕ್ಷಿಣ ಗೋವಾದ ಫೋಂಡಾ ತಾಲ್ಲೂಕಿನಲ್ಲಿ ಅತಿ ಹೆಚ್ಚು 190 ಸೆಂ.ಮೀ. ಮಳೆಯಾಗಿದೆ.

Share This Article