ಹಿಂಡಲಗಾ ಕೆರೆಯಲ್ಲಿ ಬಾಲಕ, ಮಹಿಳೆಯ ಶವ ಪತ್ತೆ

khushihost
ಹಿಂಡಲಗಾ ಕೆರೆಯಲ್ಲಿ ಬಾಲಕ, ಮಹಿಳೆಯ ಶವ ಪತ್ತೆ

ಬೆಳಗಾವಿ: ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಹಿಂಡಲಗಾ ಗಣಪತಿ ಕೆರೆಯಲ್ಲಿ ಓರ್ವ ಬಾಲಕ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗನಂತೆ ಕಾಣುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದೀಗ ಪೊಲೀಸರು ಹಾಗೂ ಸಾರ್ವಜನಿಕರು ಆಗಮಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಘಟನೆಗೆ ಕಾರಣ ಏನು ಎಂದು ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಘಟನೆ ನಡೆದಿದೆ.

Share This Article