ಬೆಳಗಾವಿ ಕಚೇರಿಯಲ್ಲಿ ತಹಸೀಲ್ದಾರ ಕಚೇರಿ ನೌಕರನ ಆತ್ಮಹತ್ಯೆ

khushihost
ಬೆಳಗಾವಿ ಕಚೇರಿಯಲ್ಲಿ ತಹಸೀಲ್ದಾರ ಕಚೇರಿ ನೌಕರನ ಆತ್ಮಹತ್ಯೆ

ಬೆಳಗಾವಿ : ಹಿರಿಯ ಅಧಿಕಾರಿಗಳ ಕಿರುಕುಳ ಸಹಿಸಲಾರದೇ ಬೆಳಗಾವಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಯೊಬ್ಬರು ರಿಸಾಲದಾರ ರಸ್ತೆಯಲ್ಲಿರುವ ಕಚೇರಿಯಲ್ಲಿ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು (ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಸಿ) ರುದ್ರೇಶ ಯಾದವಣ್ಣವರ ಎಂದು ಗುರುತಿಸಲಾಗಿದೆ.

ಸಾವಿಗೆ ಶರಣಾಗುವದಕ್ಕೂ ಮೊದಲು ತಮ್ಮ ಹೇಳಿಕೆಯನ್ನು ವಿಡಿಯೋ ರೆಕಾರ್ಡ ಮಾಡಿ ನಂತರ ತಹಸೀಲ್ದಾರ ಸೇರಿದಂತೆ ತಮ್ಮ ಕಚೇರಿಯ ನೌಕರರ ವಾಟ್ಸಪ್ ಗುಂಪಿನಲ್ಲಿ ಶೇರ್ ಮಾಡಿದ್ದಾರೆ. “ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ” ಎಂದು ಕನ್ನಡದಲ್ಲಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಕೂಡ ಸರಕಾರಿ ನೌಕರರರಾಗಿದ್ದಾರೆ.

ಖಡೇಬಜಾರ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article