ತಬಲಾ ದಂತಕಥೆ ಜಾಕೀರ ಹುಸೇನ್ ಇನ್ನಿಲ್ಲ

khushihost
ತಬಲಾ ದಂತಕಥೆ ಜಾಕೀರ ಹುಸೇನ್ ಇನ್ನಿಲ್ಲ

ಹೊಸದಿಲ್ಲಿ:  ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಬೆಳಗಿದ್ದ ತಬಲಾ ವಾದಕ ಮತ್ತು ಸಂಯೋಜಕ ಸಂಯೋಜಕ ಜಾಕೀರ ಹುಸೇನ ಅವರು ರವಿವಾರ ನಿಧನರಾದರು.

73 ವರ್ಷದ ಹುಸೇನ ಅವರು ರವಿವಾರ ಮುಂಜಾನೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಅಮೇರಿಕದ ಸ್ಯಾನಫ್ರಾನ್ಸಿಸ್ಕೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು ಎಂದು ಅವರ ಸ್ನೇಹಿತ ರಾಕೇಶ ಚೌರಾಸಿಯಾ ತಿಳಿಸಿದ್ದಾರೆ.

 

ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರರಾಗಿದ್ದ ಜಾಕೀರ ಹುಸೇನ ಅವರು ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಮೂಲಕ ವಿಶ್ವ ವಿಖ್ಯಾತಿಯನ್ನು ಪಡೆದಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ್ದರು.

Share This Article