ಅಣ್ಣ ಪಡೆದ ಸಾಲಕ್ಕೆ ತಮ್ಮನಿಗೆ ಇರಿತ!

khushihost
ಅಣ್ಣ ಪಡೆದ ಸಾಲಕ್ಕೆ ತಮ್ಮನಿಗೆ ಇರಿತ!

ಧಾರವಾಡ : ಅಣ್ಣ ಪಡೆದ ಸಾಲಕ್ಕೆ ತಮ್ಮನಿಗೆ ಚಾಕುವಿನಿಂದ ಇರಿದ ಘಟನೆ ಶುಕ್ರವಾರ ಮುಂಜಾನೆ ಧಾರವಾಡದ ಕಂಠಿಗಲ್ಲಿಯಲ್ಲಿ ನಡೆದಿದೆ.

ಕಂಠಿಗಲ್ಲಿಯ ನಿವಾಸಿ 25-ವರುಷದ ರಾಘವೇಂದ್ರ ಗಾಯಕವಾಡ ಮಲ್ಲಿಕ ಎಂಬಾತನಿಂದ ಚಾಕು ಇರಿತಕ್ಕೆ ಒಳಗಾದವರು. ಮಲ್ಲೀಕ ಚಾಕುವಿನಿಂದ ರಾಘವೇಂದ್ರನ ಬೆನ್ನಿಗೆ ಇರಿದಿದ್ದು ಅರ್ಥ ಚಾಕು ಅವರ ಬೆನ್ನಿನಲ್ಲಿ ಉಳಿದಿದ್ದು ಉಳಿದ ಬಾಗ ಮುರಿದು ಕೆಳಗೆ ಬಿದ್ದಿದೆ. ಕಿಮ್ಸ ಆಸ್ಪತ್ರೆಯಲ್ಲಿ ಬೆನ್ನಿನಲ್ಲಿ ಸಿಲುಕ್ಕಿದ್ದ ಚಾಕುವನ್ನು ತೆರೆಯಲಾಯಿತು.

ರಾಘವೇಂದ್ರನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸಗೇ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿ ರವೀಶ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಉಪನಗರ ಠಾಣೆ ಇನ್‌ಸ್ಪೆಕ್ಟರ್ ದಯಾನಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತಂತೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article