ಗದಗ :ಸ್ವಚ್ಛ ದೇಶ, ಸ್ವಚ್ಛ ದೇಹ : ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ

khushihost
ಗದಗ :ಸ್ವಚ್ಛ ದೇಶ, ಸ್ವಚ್ಛ ದೇಹ : ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ

ಗದಗ : ನಗರದ ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್.‌ ಎಸ್.‌ ಎಸ್.‌ ಘಟಕದ ವತಿಯಿಂದ ಶನಿವಾರ ಗದಗ ನಗರದ ಶ್ರೀ ರಾಮಕೃಷ್ಣ ಆಶ್ರಮ(ಸ್ವಾಮಿ ವಿವೇಕಾನಂದ ಆಶ್ರಮ) ದಲ್ಲಿ ಸ್ವಚ್ಛ ದೇಶ, ಸ್ವಚ್ಛ ದೇಹ ಎಂಬ ವಾಕ್ಯದ ಅಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.

ಆಶ್ರಮದ ಸ್ವಾಮಿಗಳಾದ ಶ್ರೀ ಈಶ್ವರದಾಸ ಕೊಪ್ಪೇಸರ್‌ ಅವರು ಎಸ್.‌ ಎಸ್.‌ ಘಟಕದ ಸ್ವಯಂ ಸೇವಕರೊಂದಿಗೆ ಸಂವಾದವನ್ನು ಮಾಡಿದರು. ಜೊತೆಗೆ ಶಿಕ್ಷಣ ಮತ್ತು ದೇಶದ ಬಗ್ಗೆ ಹಲವಾರು ವಿಚಾರಗಳನ್ನು ಚರ್ಚಿಸಿದರು.
ಈ ಚಟುವಟಿಕೆಯಲ್ಲಿ ಶ್ರೀ ರಾಮಕೃಷ್ಣ ಆಶ್ರಮ(ಸ್ವಾಮಿ ವಿವೇಕಾನಂದ ಆಶ್ರಮ) ದ ಸ್ವಾಮಿಗಳಾದ ಶ್ರೀ ಈಶ್ವರದಾಸ ಕೊಪ್ಪೇಸರ್‌, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯನಿರ್ವಾಹಕರಾದ ಅಪ್ಪಣ್ಣ ಹಡಪದ, ನೀಲಮ್ಮ ಸೀತಾರಳ್ಳಿ, ಐಶ್ವರ್ಯ ಶಲವಡಿ, ಸಹನಾ ನಾಲ್ವಾಡದ, ಎನ್.‌ ಎಸ್.‌ ಎಸ್.‌ ತಂಡದ ನಾಯಕರಾದ ಶಶಿಕುಮಾರ ಎಸ್., ಫಕ್ಕೀರೇಶ ಒಂಟಿ, ಶಹನಾಜ ನಧಾಪ‌ ಮತ್ತು ಎನ್.‌ ಎಸ್.‌ ಎಸ್.‌ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.

Share This Article