ಕಬ್ಬಿಗೆ ದರ ನಿಗದಿಗಾಗಿ ನಡೆದ ಹೋರಾಟದ ವೇಳೆ ವಿಷ ಸೇವಿಸಿದ ರೈತ

khushihost
ಕಬ್ಬಿಗೆ ದರ ನಿಗದಿಗಾಗಿ ನಡೆದ ಹೋರಾಟದ ವೇಳೆ ವಿಷ ಸೇವಿಸಿದ ರೈತ

ಬೆಳಗಾವಿ: ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರ ನಡೆಸುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಸಂಸದ ಜಗದೀಶ್ ಶೆಟ್ಟರ ಆಗಮಿಸಿ ಮಾತನಾಡುವ ವೇಳೆ ಅನ್ನದಾತ ವಿಷ ಸೇವಿಸಿದ ಘಟನೆ ಸೋಮವಾರ ನಡೆದಿದೆ.

ಕಬ್ಬಿಗೆ ದರ ನಿಗದಿ ಮಾಡಿ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘ, ಹಸಿರು ಸೇನೆ ಹಾಗೂ ರಾಜ್ಯ ರತ ಸಂಘಗಳ ನೇತೃತ್ವದಲ್ಲಿ ಗುರುವಾರದಿಂದ ನಿರಂತರವಾಗಿ ರೈತರು ಗುರ್ಲಾಪೂರ ಕ್ರಾಸ್ ನಲ್ಲಿ ನಿಪ್ಪಾಣಿ- ಮುಧೋಳ ರಾಜ್ಯ ಹದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರೈತರ ಅಳಲು ಅಲಿಸಿದ ಬಂದ ಸಂಸದ ಜಗದೀಶ ಶೆಟ್ಟರ ಅವರ ಸನಿಹ ಬಳಿ ರೈತ ಲಕ್ಕಪ್ಪ ಗುಣಗಾರ ಎಂಬುವರು ಕ್ರಿಮಿನಾಶಕ ಸೇವಿಸಿದ್ದಾರೆ. ಕೂಡಲೇ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವಿಸಿದ ರೈತ ರಾಯಬಾಗ ತಾಲುಕೂನ ಅಲಕನೂರು ಗ್ರಾಮದವರಾಗಿದ್ದು, 5 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಇವರು ಭಾಗವಹಿಸಿದ್ದರು.

Share This Article